ಬುಧವಾರ, ಅಕ್ಟೋಬರ್ 11, 2023
ಅನಾಮಧೇಯ ಮೃತ ಮಹಿಳೆ ಗುರುತು ಪತ್ತೆಗಾಗಿ ಮನವಿ
ಬಳ್ಳಾರಿ,ಅ.11(ಕರ್ನಾಟಕ ವಾರ್ತೆ):
ಕಂಪ್ಲಿ ಪಟ್ಟಣದ ಬಸ್‍ನಿಲ್ದಾಣ ಹಾಗೂ ಶಿಬಿರದಿನ್ನಿ ಏರಿಯಾದಲ್ಲಿ ಸುಮಾರು 55 ರಿಂದ 60 ವರ್ಷದ ಅನಾಮಧೇಯ ಮಹಿಳೆಯು ವಾಸವಿದ್ದು, ಆರೈಕೆ ಇಲ್ಲದೇ, ಯಾವುದೋ ಖಾಯಿಲೆಯಿಂದ ಬಳಲಿ ತೀವ್ರ ಅಸ್ವಸ್ಥತೆಯಿಂದ ಸೆ.29ರಂದು ಮೃತ್ತಪಟ್ಟಿದ್ದು, ಮೃತಳ ಗುರುತು ಮತ್ತು ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಕಂಪ್ಲಿ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಮೃತಳ ಚಹರೆ ಗುರುತು: 4.3 ಅಡಿ ಎತ್ತರ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಕೂದಲು ಹೊಂದಿದ್ದು, ಕೆಂಪು ಬಣ್ಣದ ಸೀರೆ, ಕುಪ್ಪಸ ಬಟ್ಟೆ ಧರಿಸಿರುತ್ತಾಳೆ.
ಮೃತಳ ಬಗ್ಗೆ ಹಾಗೂ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿಐ ದೂ.8277977722, 9480803038, ತೋರಣಗಲ್ಲು ಡಿಎಸ್‍ಪಿ ಮೊ.9480803010, ಬಳ್ಳಾರಿ ಎಸ್‍ಪಿ ಅವರ ದೂ.08392-251800 ಗೆ ಸಂಪರ್ಕಿಸಬಹುದಾಗಿದೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ