ಗುರುವಾರ, ಅಕ್ಟೋಬರ್ 12, 2023

ವ್ಯಕ್ತಿ ಕಾಣೆ

ಬಳ್ಳಾರಿ,ಅ.12(ಕರ್ನಾಟಕ ವಾರ್ತೆ): ಇಲ್ಲಿನ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಮಲ್ಲಿಕಾರ್ಜುನ ಎನ್ನುವ 48 ವರ್ಷದ ವ್ಯಕ್ತಿಯು 2021ರ ಡಿ.27ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು. ಚಹರೆ ಗುರುತು: 5.2 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ದೃಡವಾದ ಮೈಕಟ್ಟು ಹೊಂದಿದ್ದು, ತೆಲುಗು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಅರ್ಧ ತೋಳಿನ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆಯ ದೂ.08392-272192, ಠಾಣೆಯ ಪಿಎಐ ಮೊ.9480803082 ಹಾಗೂ ಪಿಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ