ಸೋಮವಾರ, ಅಕ್ಟೋಬರ್ 16, 2023

ಮಹಾನಗರ ಪಾಲಿಕೆ: ಬೀದಿ ಬದಿ ವ್ಯಾಪಾರಸ್ಥರಿಂದ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಅ.16(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಸಹಾಯಧನ, ಎನ್.ಎಮ್.ಡಿ.ಸಿ ಹಾಗೂ ಸಿ.ಎಸ್.ಆರ್. ಅನುದಾನದಡಿ ಪೆÇ್ರೀತ್ಸಾಹ ಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ವಸತಿ ರಹಿತ ಬೀದಿ ಬದಿ ವ್ಯಾಪಾರಸ್ಥರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಪಿಎಂಎವೈ, ಹೆಚ್‍ಎಫ್‍ಎ, ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಯೋಜನೆಯಡಿ ನಗರದ ಮುಂಡ್ರಿಗಿ ಆಶ್ರಯ ಬಡಾವಣೆಯಲ್ಲಿ ಜಿ+2 ಮಾದರಿಯ 5616 ಮನೆಗಳ ನಿರ್ಮಾಣ ಯೋಜನೆ ಅನುಷ್ಠಾನಗೊಳಿಲಾಗುತ್ತಿದೆ. ವಸತಿ ಸೌಲಭ್ಯ ಪಡೆಯಲು ಇಚ್ಛಿಸುವ ನಗರದ ವಸತಿ ರಹಿತ (ಸ್ವಂತ ಮನೆ ಇಲ್ಲದೇ ಇರುವ) ಬೀದಿ ಬದಿ ವ್ಯಾಪಾರಸ್ಥರು ಆರ್ಹತೆಯ ಮಾನದಂಡ ಹಾಗೂ ಫಲಾನುಭವಿ ವಂತಿಕೆ ಪಾವತಿಸಲು ಶಕ್ತರಾಗಿರುವ ಹಾಗೂ ಆಸಕ್ತಿ ಹೊಂದಿರುವ ಕುಟುಂಬಗಳು ಕೂಡಲೇ ನಿಗಧಿತ ನಮೂನೆಯ ಅರ್ಜಿ ಪಡೆದು ಅವಶ್ಯಕ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಹಳೇ ಕಚೇರಿಗೆ ಭೇಟಿ ನಿಡಿ ಅರ್ಜಿ ಸಲ್ಲಿಸಬಹುದು. ನವೆಂಬರ್.06 ರೊಳಗಾಗಿ ಅರ್ಜಿ ಸಲ್ಲಿಸಬೇಕು. *ಅರ್ಹತೆ ಮಾನದಂಡ:* ವಸತಿ ರಹಿತರಾಗಿರಬೇಕು, ನಗರದ ನಿವಾಸಿಗಳಾಗಿರಬೇಕು, ಬೀದಿ ಬದಿಯ ವ್ಯಾಪಾರಸ್ಥರ ಗುರುತಿನ ಚೀಟಿ ಹೊಂದಿರಬೇಕು ಅಥವಾ ಪಾಲಿಕೆಯಿಂದ ಪಡೆಯಲಾದ ಎಲ್.ಓ.ಆರ್ ಪ್ರಮಾಣ ಪತ್ರ ಹೊಂದಿರಬೇಕು, ವಾರ್ಷಿಕ ಆದಾಯ ರೂ.3 ಲಕ್ಷ ಮೀರಿರಬಾರದು, ಫಲಾನುಭವಿ ವಂತಿಗೆ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಬದ್ದರಾಗಿರಬೇಕು, ರೂ.90 ಸಾವಿರ ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ