ಗುರುವಾರ, ಅಕ್ಟೋಬರ್ 26, 2023
ನ.26ರಂದು ಮಾಜಿ ಸೈನಿಕರ ಕುಂದು ಕೊರತೆ ನಿವಾರಣೆ ಸಭೆ
ಬಳ್ಳಾರಿ,ಅ.26(ಕರ್ನಾಟಕ ವಾರ್ತೆ):
ಬೆಳಗಾವಿ ನಗರದ ಮರಾಠಾ ಲೈಟ ಇನಫಂಟ್ರಿ, ಶಿವಾಜಿ ಸ್ಟೇಡಿಯಂನಲಿ,್ಲ ನ.26 ರಂದು ಬೆಳಿಗ್ಗೆ 8.30 ರಿಂದ ಸಂಜೆ 4 ಗಂಟೆಯವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಮಾಜಿ ಸೈನಿಕರ ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಿ, ವೈದಕಿಯ ಶಿಬಿರ, ಇಸಿಎಚ್‍ಎಸ್, ಬ್ಯಾಂಕ್, ಆಧಾರ್‍ಕಾರ್ಡ್, ಸ್ಪರ್ಶ ಸಂಬಂಧಿಸಿದ ಸಮಸ್ಯೆಗಳು ಮತ್ತು ZSಃs & ಆPಆಔsಗಳೊಂದಿಗೆ ಸಂವಹನ, ಕ್ಯಾಂಟಿನ್ ಕಾರ್ಡ್‍ಗಳ ಪ್ರಕ್ರಿಯೆ ಕುರಿತು ಪರಿಹಾರ ಕ್ರಮ ಕೈಗೊಳ್ಳಲಾಗುವುದು.
ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ತಮ್ಮ ಸಮಸ್ಯೆ ಕುರಿತು ಹೆಸರುಗಳನ್ನು ನೊಂದಾಯಿಸಿಕೊಂಡು, ನೋಂದಣಿ ಸಂಖ್ಯೆಯನ್ನು ಪಡೆಯಬೇಕಾಗಿರುತ್ತದೆ. ನೊಂದಣಿ ಮಾಡಲು ಬಯಸುವವರು ತಮ್ಮ ಕುಂದು ಕೊರತೆಗಳ ಅರ್ಜಿ ಮತ್ತು ಅದಕ್ಕೆ ಸಂಭಂಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8618368315 ಗೆ ಅಪ್‍ಲೋಡ್ ಮಾಡಬಹುದು.
ಶಿಬಿರದಲ್ಲಿ ಬೆಳಗಾವಿ ಜಿಲ್ಹೆ ಮತ್ತು ಧಾರವಾಡ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರುಗಳು ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8618368315 ಗೆ ಅಪ್‍ಲೋಡ್ ಮಾಡಿದ ವಿವರವನ್ನು ತಿಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ದೂ.0836-2440176 ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಎಸ್.ಲೋಲಾಕ್ಷ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ