ಶನಿವಾರ, ಅಕ್ಟೋಬರ್ 28, 2023

ಮಂಜೂರಾದ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಪುನಃ ಸಾಲ ಪಡೆಯಲು ಅರ್ಹರು: ದೀಪ ಶ್ರೀ

ಬಳ್ಳಾರಿ,ಅ.28(ಕರ್ನಾಟಕ ವಾರ್ತೆ): ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಫಲಾನುಭವಿಗಳು ಪಡೆದ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಪುನಃ ನವೀಕರಣ ಸಾಲ ಪಡೆಯಲು ಅರ್ಹರಾಗಿರುತ್ತಾರೆ ಎಂದು ನಿಗಮ ವ್ಯವಸ್ಥಾಪಕ ನಿರ್ದೇಶಕಿ ದೀಪ ಶ್ರೀ.ಕೆ ಅವರು ಹೇಳಿದ್ದಾರೆ. ಅವರು, ಜಿಲ್ಲೆಯ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಯೋಜನೆಗಳಡಿ ಸಾಲ-ಸೌಲಭ್ಯ ಪಡೆದಂತಹ ಫಲಾನುಭವಿಗಳ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿ, ಫಲಾನುಭವಿಗಳ ಕುಂದುಕೊರತೆಗಳನ್ನು ಆಲಿಸಿ, 2019-20 ಮತ್ತು 2020-21 ರ ಫಲಾನುಭವಿಗಳು ಮಂಜೂರಾದ ಸಾಲವನ್ನು 34 ಕಂತುಗಳೊಗಾಗಿ ಮರುಪಾವತಿಸಿದ್ದಲ್ಲಿ ಮಾತ್ರ ಪುನಃ ಸಾಲವನ್ನು ಪಡೆಯಲು ಆರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ. ಮಂಜೂರಾದ ಸಾಲವನ್ನು ಆನ್‍ಲೈನ್ ಮೂಲಕ ಮರುಪಾವತಿ ಮಾಡಬೇಕು. 2023-24ನೇ ಸಾಲಿಗೆ ನೂತನ ಯೋಜನೆಗಳಾದ ಸ್ವಯಂ ಉದ್ಯೋಗ, ಆಹಾರ ವಾಹಿನಿ, ವಾಸವಿ ಜಲಶಕ್ತಿ, ಅರಿವು ಶೈಕ್ಷಣಿಕ ಸಾಲದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ