ಮಂಗಳವಾರ, ಅಕ್ಟೋಬರ್ 17, 2023

ಯುವಕ ಕಾಣೆ; ಪ್ರಕರಣ ದಾಖಲು

ಬಳ್ಳಾರಿ,ಅ.17(ಕರ್ನಾಟಕ ವಾರ್ತೆ): ಮೋಕಾ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಣೇನೂರು ಗ್ರಾಮದ, ವಾರ್ಡ ನಂ.01, ಬಸವಣ್ಣ ಗುಡಿ ಹತ್ತಿರದ ನಿವಾಸಿ ವೈ.ಉಮ ಮಹೇಶ್ ಎನ್ನುವ 23 ವರ್ಷದ ಯುವಕ ಜುಲೈ 29ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.8 ಅಡಿ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟೀ ಶರ್ಟ್, ಪಾಚಿ ಕಲರ್ ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆಯುಳ್ಳ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೋಕಾ ಪೆÇಲೀಸ್ ಠಾಣೆಯ ಪಿ.ಎಸ್.ಐ ಮೊ.9480803050, ಸಿರುಗುಪ್ಪ ಉಪ ವಿಭಾಗ ಡಿ.ಎಸ್.ಪಿ ಮೊ.9480803021, ಪಿ.ಡಿ ಹಳ್ಳಿ ವೃತ್ತದ ಸಿ.ಪಿ.ಐ ಮೊ.9480803031 ಹಾಗೂ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ಮೋಕಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ