ಸೋಮವಾರ, ಅಕ್ಟೋಬರ್ 16, 2023

ತಾಯಿ, ಮಗ ಕಾಣೆ: ಪತ್ತೆಗೆ ಸಹಕರಿಸಿ

ಬಳ್ಳಾರಿ,ಅ.16(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ತೋರಣಗಲ್ಲು (ಆರ್‍ಎಸ್) ನಿವಾಸಿಯಾದ ರಾಧಾ ಎನ್ನುವ 25 ವರ್ಷದ ಮಹಿಳೆ ಹಾಗೂ ತನ್ನ ಮಗ ಅಕಿಲ್ ಎನ್ನುವ 07 ವರ್ಷದ ಬಾಲಕ ಸೆ.25ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಅವರು ತಿಳಿಸಿದ್ದಾರೆ. ರಾಧಾ ಚಹರೆ ಗುರುತು: ಎತ್ತರ 5 ಅಡಿ, ಕೋಲುಮುಖ, ಕಪ್ಪು ಮೈಬಣ್ಣ, ಬಲಗೈಯಲ್ಲಿ ಇಂಗ್ಲಿಷ್‍ನಲ್ಲಿ ಎ ಮತ್ತು ಆರ್ ಹಾಗೂ ಸಿದ್ದಪ್ಪ ಅಂತಾ ಅಂಚೆ ಹಾಕಿಸಿಕೊಂಡಿದ್ದು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಟಾಪ್ ಮತ್ತು ಬಿಳಿ ಪ್ಯಾಂಟ್ ಹಾಗೂ ಬಿಳಿ ಬಣ್ಣದ ವೆಲ್ ಧರಿಸಿರುತ್ತಾಳೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆ ಮಾತನಾಡುತ್ತಾಳೆ. ಅಕಿಲ ಚಹರೆ ಗುರುತು: ಎತ್ತರ 2.5 ಅಡಿ, ಕೋಲು ಮುಖ, ಹಣೆಯಲ್ಲಿ ಹಳೆಯ ಗಾಯದ ಗುರುತು ಇರುತ್ತದೆ ಕೆಂಪು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆಯುಳ್ಳ ತಾಯಿ ಮತ್ತು ಮಗನ ಬಗ್ಗೆ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆ ದೂ.08395-250100, ಮೊ.9480803062 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ