ಬುಧವಾರ, ಅಕ್ಟೋಬರ್ 18, 2023
ದೀಕ್ಷಾ ಭೂಮಿಗೆ ಭೇಟಿ: ಅನುಯಾಯಿಗಳ ಆಯ್ಕೆ
ಬಳ್ಳಾರಿ.ಅ.18(ಕರ್ನಾಟಕ ವಾರ್ತೆ):
ಪ್ರಸ್ತಕ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿ ಯಾತ್ರೆ ಕೈಗೊಳ್ಳಲು ಈಗಾಗಲೇ ಅರ್ಜಿ ಸಲ್ಲಿಸಿರುವ ಅನುಯಾಯಿಗಳನ್ನು ಜಿಲ್ಲೆಗೆ ನಿಗದಿಪಡಿಸಿರುವ ಗುರಿಯಂತೆ 160 ಜನರನ್ನು “ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲನೇ ಆದ್ಯತೆ” ಮೇರೆಗೆ ಅ.22ರಂದು ಬಸ್‍ನಲ್ಲಿ ಕಳುಹಿಸಿಕೊಡಲು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸತೀಶ್.ಕೆ.ಹೆಚ್ ಅವರು ತಿಳಿಸಿದ್ದಾರೆ.
ಬಾಕಿ ಉಳಿದ ಅನುಯಾಯಿಗಳು ದೀಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸಿದಲ್ಲಿ ಅ.21ರಿಂದ 25ರವರೆಗೆ ಹವಾ ನಿಯಂತ್ರಣ ರಹಿತ ಸ್ಲೀಪರ್ ಕೋಚ್ (ನಾನ್ ಎಸಿ ಸ್ಲೀಪರ್) ರೈಲಿನಲ್ಲಿ ಹೋಗಿಬರಲು ಅವಕಾಶ ಕಲ್ಪಿಸಿಕೊಡಲಾಗುವುದು.
ದೀಕ್ಷಾ ಭೂಮಿ ಯಾತ್ರೆ ಕೈಗೊಂಡ ಬಗ್ಗೆ ರೈಲು ಟಿಕೇಟ್‍ನ್ನು ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಿದಲ್ಲಿ ರೈಲು ಪ್ರಯಾಣ ದರದ ವೆಚ್ಚವನ್ನು ಮಾತ್ರ ಪಾವತಿಸಲಾಗುವುದು. ಊಟ ಮತ್ತು ವಾಸ್ತವ್ಯದ ವೆಚ್ಚವನ್ನು ಆಯಾ ಅನುಯಾಯಿಗಳೇ ಭರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ