ಬುಧವಾರ, ಅಕ್ಟೋಬರ್ 11, 2023
ರೂಪನಗುಡಿ: ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ತರಬೇತಿ ಹಾಗೂ ಕ್ಷಯರೋಗಿಗಳಿಗೆ ಕಿಟ್ ವಿತರಣೆ
ಬಳ್ಳಾರಿ,ಅ.11(ಕರ್ನಾಟಕ ವಾರ್ತೆ):
ಆಯುಷ್ಮಾನ್ ಭವ ಕೇಂದ್ರ ಆರೋಗ್ಯ ಕಾರ್ಯಕ್ರಮದಡಿ ತಾಲ್ಲೂಕಿನ ರೂಪನಗುಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರಿಗೆ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ತರಬೇತಿ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರರಿಗೆ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಲಾಯಿತು. ಕ್ಷಯ ರೋಗದ ಬಗ್ಗೆ ತರಬೇತಿ ನೀಡಲಾಯಿತು.
ನಿಕ್ಷಯಮಿತ್ರ ಕಾರ್ಯಕ್ರಮದಡಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಅವರು, 10 ಮಂದಿ ಕ್ಷಯ ರೋಗಿಗಳಿಗೆ ಆರು ತಿಂಗಳವರೆಗೆ ಆಹಾರ ಕಿಟ್ ವಿತರಿಸಿದರು. ಮತ್ತೋರ್ವ ದಾನಿ ನಾರಾಯಣಸ್ವಾಮಿ 7 ಮಂದಿ ಕ್ಷಯ ರೋಗಿಗಳಿಗೆ ಆರು ತಿಂಗಳವರೆಗೆ ಆಹಾರ ಕಿಟ್ ವಿತರಿಸಿದರು.
ಒಟ್ಟು 17 ಕ್ಷಯ ರೋಗಿಗಳನ್ನು ಆರು ತಿಂಗಳವರೆಗೆ ದತ್ತು ತೆಗೆದುಕೊಂಡು ತಾವೇ ದಾನಿಗಳಾಗಿ ಆಹಾರ ಸಾಮಾಗ್ರಿಗಳನ್ನು ಕಿಟ್‍ಗಳನ್ನು ವಿತರಿಸಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೂಕ್ತ ಆರೈಕೆಗಾಗಿ ಉತ್ತಮ ಯೋಜನೆಯಾಗಿದ್ದು, ಎಲ್ಲರೂ ದಾನಿಗಳಾಗಿ ಮುಂದೆ ಬರಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರೂಪನಗುಡಿ ಗ್ರಾಪಂನ ಅಧ್ಯಕ್ಷ ಮಲ್ಲಯ್ಯ, ಉಪಾಧ್ಯಕ್ಷ, ರಾಮಾಂಜಿನಿ, ಮಾಜಿ ಅಧ್ಯಕ್ಷ ನಾಗರಾಜು, ಪಿ.ಡಿ.ಓ ಪ್ರಕಾಶ್, ಶಿವಾನಂದ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಚೇರಿಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ವೀರೇಶ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪಿ.ಮೆರ್ಸಿ, ಸಜನಿ, ಶಾಜಿದಾ ಸುಲ್ತಾನ ಸೇರಿದಂತೆ ಗ್ರಾಪಂನ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಆಶಾ ಸಿಬ್ಬಂದಿಯವರು, ಸ್ತ್ರೀ ಶಕ್ತಿ ಸಂಘದ ಸದಸ್ಯೆರು, ಅಂಗನವಾಡಿ ಶಿಕ್ಷಕಿಯರು ಮತ್ತು ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ