ಸೋಮವಾರ, ಜನವರಿ 1, 2024
ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ: 63.49 ಲಕ್ಷ ರೂ. ಸಂಗ್ರಹ
ಬಳ್ಳಾರಿ,ಡಿ.31(ಕರ್ನಾಟಕ ವಾರ್ತೆ):
ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶುಕ್ರವಾರ ನಡೆಸಲಾಯಿತು.
2023 ಆ.16 ರಿಂದ ಡಿ.29 ರ ವರೆಗೆ ಅಳವಡಿಸಲಾಗಿದ್ದ ದೇವಸ್ಥಾನದ 4 ನಾಲ್ಕು ಹುಂಡಿಗಳ ಎಣಿಕೆ ಕಾರ್ಯ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ಹುಂಡಿ ಎಣಿಕೆ ವೇಳೆ ರೂ.63,49,235 ಹಣ ಸಂಗ್ರಹವಾಗಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಹೆಚ್.ಗಂಗಾಧರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಪಿ.ಎಂ.ರಾಜಶೇಖರ್, ಪಾರ್ವತಿ ನಗರದ ಕೆಜಿಬಿ ಬ್ಯಾಂಕ್‍ನ ವ್ಯವಸ್ಥಾಪಕರಾದ ರಾಮಲಿಂಗಪ್ಪ ಹಾಗೂ ಗಾಂಧಿನಗರ ಪೊಲೀಸ್ ಠಾಣೆಯ ಅರಕ್ಷಕ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ