ಮಂಗಳವಾರ, ಜನವರಿ 30, 2024
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜ.30(ಕರ್ನಾಟಕ ವಾರ್ತೆ):
ಗಾಂಧಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 35 ವರ್ಷದ ಎಂ.ಮಂಜುನಾಥ ಎನ್ನುವ ವ್ಯಕ್ತಿ ಜ.11ರಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಗಾಂಧಿನಗರ ಪೋಲಿಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ ಗುರುತು: ಎತ್ತರ 4.9 ಅಡಿ, ಕೋಲುಮುಖ, ಕಪ್ಪು ಮೈಬಣ್ಣ ತೆಳ್ಳನೆಯ ಮೈಕಟ್ಟನ್ನು ಹೊಂದಿದ್ದು, ತೆಲುಗು, ಕನ್ನಡ ಭಾಷೆ ಮಾತನಾಡುತ್ತಾನೆ. ವ್ಯಕ್ತಿ ಕಾಣೆಯಾದ ಸಂಧರ್ಭದಲ್ಲಿ ನೀಲಿ ಮತ್ತು ಬಿಳಿ ಬಣ್ಣ ಮಿಶ್ರಿತ ಚಕ್ಸ್ ಶರ್ಟ್ ಹಾಗು ಗ್ರೇ ಕಲರ್ ಬರ್ಮೋಡ ಧರಿಸಿರುತ್ತಾನೆ.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ:08392258100, ಗಾಂಧಿನಗರ ಪೋಲಿಸ್ ಠಾಣೆ ದೂ:08392272192 ಮತ್ತು ಗಾಂಧಿನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಮೊ:9480803082, ಗಾಂಧಿನಗರ ಪೋಲಿಸ್ ಠಾಣೆಯ ಪಿ.ಐ ಮೊ:9480803046 ಇವರಿಗೆ ಕರೆಮಾಡಿ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ