ಶುಕ್ರವಾರ, ಜನವರಿ 19, 2024

ಸಿರುಗುಪ್ಪ: ಜ.20 ರಂದು ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಬಳ್ಳಾರಿ,ಜ.19(ಕರ್ನಾಟಕ ವಾರ್ತೆ): ಕಾರ್ಯ ಮತ್ತು ಪಾಲನೆ ಉಪವಿಭಾಗ ಜೆಸ್ಕಾಂ ಸಿರುಗುಪ್ಪ ವ್ಯಾಪ್ತಿಗೆ ಒಳಪಡುವ ವಿದ್ಯುತ್ ಗ್ರಾಹಕರಿಗೆ ಜ.20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಸಿರುಗುಪ್ಪ ಉಪವಿಭಾಗ ಕಚೇರಿಯಲ್ಲಿ ಜೆಸ್ಕಾಂ ಗ್ರಾಹಕರ ಕುಂದುಕೊರತೆ ಸಭೆ ಏರ್ಪಡಿಸಲಾಗಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಕಾರ್ಯ ಮತ್ತು ಪಾಲನೆ ಉಪವಿಭಾಗ ಜೆಸ್ಕಾಂ ಸಿರುಗುಪ್ಪ ವ್ಯಾಪ್ತಿಗೆ ಸಂಬಂಧಿಸಿದಂತೆ ವಿದ್ಯುತ್ ಸಮಸ್ಯೆ ಇರುವಂತಹ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ