ಗುರುವಾರ, ಜನವರಿ 25, 2024
ಜ.28 ರಂದು ‘ಡರ್ಮಾಬೆಸಿಕ್ಸ್ - 2024’
ಬಳ್ಳಾರಿ,ಜ.25(ಕರ್ನಾಟಕ ವಾರ್ತೆ):
ಐಎಡಿವಿಎಲ್(ಭಾರತೀಯ ಚರ್ಮರೋಗ ತಜ್ಞರು, ಪಶುವೈದ್ಯಶಾಸ್ತ್ರಜ್ಞರು ಮತ್ತು ಕುಷ್ಠರೋಗ ತಜ್ಞರು) ಕರ್ನಾಟಕ ಶಾಖೆಯ ಸಹಯೋಗದೊಂದಿಗೆ ಡರ್ಮಟಾಲಜಿ, ವೆನೆರಿಯೊಲಾಜಿ ಮತ್ತು ಕುಷ್ಠರೋಗ ವಿಭಾಗ ಹಾಗೂ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ‘ಡರ್ಮಾಬೆಸಿಕ್ಸ್ - 2024’ (ಆಇಖಒಂಃಂSIಅS-2024) ಕಾರ್ಯಕ್ರಮವನ್ನು ಜ.28 ರಂದು ವಿಮ್ಸ್‍ನ ವೈದ್ಯಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಮ್ಸ್‍ನ ನಿರ್ದೇಶಕರು ತಿಳಿಸಿದ್ದಾರೆ.
ವಿಮ್ಸ್‍ನ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸುವರು.
ವಿಮ್ಸ್‍ನ ಪ್ರಾಂಶುಪಾಲ ಡಾ.ಕೃಷ್ಣಸ್ವಾಮಿ.ಡಿ, ವಿಮ್ಸ್‍ನ ಸಿಇಒ ಸಿದ್ದರಾಮೇಶ್ವರ ಮತ್ತು ಎಲ್ಲಾ ವಿಮ್ಸ್ ಆಸ್ಪತ್ರೆಯ ಅಧೀಕ್ಷಕರು ಕಾರ್ಯಕ್ರಮ ಚಾಲನೆ ನೀಡುವರು.
ಐಎಡಿವಿಎಲ್ ಅಧ್ಯಕ್ಷ ಡಾ.ಮಿತಾಕ್ಷರಿ.ಎಂ ಹುಗಾರ್, ಮಹಾಲೇಖಪಾಲ ಡಾ.ಮಹೇಶ್ ಕುಮಾರ್ ಉಪಸ್ಥಿತರಿರುವರು.
ಇದು ರಾಜ್ಯದ ಮೊದಲನೇ ವರ್ಷದ ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವಾಗಿದೆ.
ಚರ್ಮರೋಗ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸುಮಾರು 200 ಸ್ನಾತಕೋತ್ತರ ಪದವೀಧರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ