ಶನಿವಾರ, ಜನವರಿ 20, 2024
ಮಹಿಳೆ ಕಾಣೆ; ಪತ್ತೆಗಾಗಿ ಮನವಿ
ಬಳ್ಳಾರಿ,ಜ.20(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮದ ಹುಲಿಗೆಮ್ಮ.ಹೆಚ್ ಎನ್ನುವ 30 ವರ್ಷದ ಮಹಿಳೆಯು ಜ.11ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಿರಿಗೇರಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಮಹಿಳೆಯ ಚಹರೆ ಗುರುತು: ಎತ್ತರ 5.1 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು ಭಾಷೆ ಮಾತಾನಾಡುತ್ತಾಳೆ. ಮಹಿಳೆ ಕಾಣೆಯಾದ ಸಂದರ್ಭದಲ್ಲಿ ಕೆಂಪು ಸೀರೆ, ಕೆಂಪು ಕುಪ್ಪಸ ಧರಿಸಿರುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೋಲಿಸ್ ಠಾಣೆ ದೂ:08396244426, ಮೊ:9480803056 ಅಥವಾ ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ ದೂ:08392258100 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ