ಮಂಗಳವಾರ, ಜನವರಿ 16, 2024

ಬ್ಯಾಟರಿ ಚಾಲಿತ ವೀಲ್‍ಚೇರ್ ವಿತರಣೆ: ಅರ್ಜಿ ಆಹ್ವಾನ

ಬಳ್ಳಾರಿ,ಜ.16(ಕರ್ನಾಟಕ ವಾರ್ತೆ) ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ದೈಹಿಕ ವಿಕಲಚೇತನರಿಗಾಗಿ 2023-24ನೇ ಸಾಲಿನ ಬ್ಯಾಟರಿ ಚಾಲಿತ ವೀಲ್‍ಚೇರ್ ವಿತರಣೆಯ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಬಯಸುವ ದೈಹಿಕ ವಿಕಲಚೇತನರು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯು.ಆರ್.ಡಬ್ಲೂ ಹಾಗು ತಾಲೂಕು ಪಂಚಾಯಿತಿಯ ಎಂ.ಆರ್.ಡಬ್ಲೂ ಅವರನ್ನು ಸಂಪರ್ಕಿಸಿ ನಿಗದಿತÀ ನಮೂನೆಯಲ್ಲಿ ಜ.30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಂಟೋನ್‍ಮೆಂಟ್‍ನ ಶಾಂತಿಧಾಮ ಆವರಣದ ಜಿಲ್ಲಾ ಅಂಗವಿಕಲರ ಕಚೇರಿ ಅಥವಾ ದೂ.08392-267886 ಹಾಗು ಬಳ್ಳಾರಿ ಜಿಲ್ಲೆಯ ತಾಲ್ಲೂಕು ಮಟ್ಟದ ಎಂ.ಆರ್.ಡಬ್ಲೂ ಬಳ್ಳಾರಿ-8880875620, ಕಂಪ್ಲಿ-76760389137, ಕುರುಗೋಡು-9538000887, ಸಿರುಗುಪ್ಪ-9743509698, ಸಂಡೂರು-9632052270 ಇವರುಗಳನ್ನು ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ