ಮಂಗಳವಾರ, ಜನವರಿ 30, 2024
ಕುಟುಂಬಸ್ಥರು ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಜ.30(ಕರ್ನಾಟಕ ವಾರ್ತೆ):
ಗಾಂಧಿನಗರ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ಎಸ್.ಎಂ.ಜಯದೇವ ಎನ್ನುವ 71 ವರ್ಷದ ವ್ಯಕ್ತಿ, ಎಸ್.ಎಂ.ಗಿರೀಜಾ ದೇವಿ ಎನ್ನುವ 65 ವರ್ಷದ ಮಹಿಳೆ, ಎಸ್.ಎಂ ಸುಲಕ್ಷನಾ ದೇವಿ ಎನ್ನುವ 40 ವರ್ಷದ ಮಹಿಳೆ ಎನ್ನುವ ಒಂದೇ ಕುಟುಂಬಸ್ಥರು 2023ರ ಜು.27 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಗಾಂಧಿನಗರ ಪೆÇೀಲಿಸ್ ಠಾಣೆಯ ಪೆÇೀಲಿಸ್ ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.
ಎಸ್.ಎಂ. ಜಯದೇವ ಅವರ ಚಹರೆ ಗುರುತು: ಎತ್ತರ 5.8 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ವ್ಯಕ್ತಿ ಕಾಣೆಯಾದ ಸಂಧರ್ಭದಲ್ಲಿ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಲುಂಗಿ ಧರಿಸಿರುತ್ತಾನೆ.
ಎಸ್.ಎಂ.ಗಿರಿಜಾ ದೇವಿ ಚಹರೆ ಗುರುತು: ಎತ್ತರ 5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂಧರ್ಭದಲ್ಲಿ ನೀಲಿ ಸೀರೆ ಧರಿಸಿರುತ್ತಾಳೆ
ಎಸ್.ಎಂ.ಸುಲಕ್ಷನಾ ದೇವಿ ಚಹರೆ ಗುರುತು: ಎತ್ತರ 5.5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂಧರ್ಭದಲ್ಲಿ ಬಿಳಿ ನೈಟಿ ಧರಿಸಿರುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಕುಟುಂಬಸ್ಥರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ:08392272192, ಗಾಂಧಿನಗರ ಪೆÇೀಲಿಸ್ ಠಾಣೆ ಪಿ.ಎಸ್.ಐ ಮೊ:9480803082, ಗಾಂಧಿನಗರ ಪಿ.ಐ ಮೊ:9480803046 ಇವರಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ