ಗುರುವಾರ, ಜನವರಿ 25, 2024

‘ಚಿಗುರು’ ಸಾಂಸ್ಕøತಿಕ ಕಾರ್ಯಕ್ರಮ ಜ.29 ರಂದು

ಬಳ್ಳಾರಿ,ಜ.25(ಕರ್ನಾಟಕ ವಾರ್ತೆ): ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ‘ಚಿಗುರು’ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಜ.29 ರಂದು ಬೆಳಿಗ್ಗೆ 10 ಗಂಟೆಗೆ ಸಂಡೂರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರ ಫ್ರೌಢಶಾಲೆಯ ಡಾ.ಎಂ.ವೈ.ಘೋರ್ಪಡೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ. ಯುವ ಸಬಲೀಕರಣ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಉದ್ಘಾಟನೆ ನೆರವೇರಿಸುವರು. ಸಂಡೂರು ಶಾಸಕ ಈ.ತುಕರಾಂ ಅವರು ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ವಿಧಾನಸಭಾ ಶಾಸಕರಾದ ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ, ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಗದೀಶ ಬಸಾಪುರ, ಛತ್ರಪತಿ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಕೆ.ಕೊಟ್ರಪ್ಪ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. *ಸಾಂಸ್ಕøತಿಕ ಕಾರ್ಯಕ್ರಮಗಳು:* ಬಳ್ಳಾರಿಯ ನಚಿಕೇತ್ ಭಟ್ ಜೋಶಿ ಅವರಿಂದ ವಾಯಲಿನ್ ವಾದನ, ದೋಣಿಮಲೈ ಟೌನ್‍ಶಿಪ್‍ನ ಟಿ.ಸಿಂಚನರಿಂದ ಸುಗಮ ಸಂಗೀತ, ಬಳ್ಳಾರಿ ನಿಧಿ ಆಟ್ರ್ಸ್ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ದೋಣಿಮಲೈ ಡಿಟಿ ಶಿಪ್‍ನ ಎಸ್.ಕೀರ್ತನಾ ಅವರಿಂದ ಜಾನಪದ ಗೀತೆಗಳು, ಸಿರಿವಾರ ಮಲ್ಲಿಕಾರ್ಜುನ ಅವರಿಂದ ಏಕಪಾತ್ರಾಭಿನಯ (ಬಾಲಕೃಷ್ಣ ಬಯಲಾಟ), ಇಬ್ರಾಹಿಂಪುರದ ಹೆಚ್.ರಾಹುಲ್ ಸಂಗಡಿಗರಿಂದ ನಾಟಕ(ಗೌತಮಬುದ್ಧ) ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ