ಸೋಮವಾರ, ಜನವರಿ 29, 2024

ಜ.30ರಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಕೇಂದ್ರ ಅಂಚೆ ಇಲಾಖೆ ಮತ್ತು ಕರ್ನಾಟಕ ವೃತ್ತ ಹಾಗೂ ಅಂಚೆ ಅಧೀಕ್ಷಕರವರ ಕಚೇರಿ ಬಳ್ಳಾರಿ ವಿಭಾಗ ಇವರ ಸಂಯಕ್ತಾಶ್ರಯದಲ್ಲಿ ಜ.30ರಂದು ಶ್ರೀಮತಿ ಬಸವರಾಜೇಶ್ವರಿ ರವರ ಜನ್ಮ ಶತಮಾನೋತ್ಸವ ಮತ್ತು ಶ್ರೀ ಕುಮಾರಸ್ವಾಮಿ ದೇವಾಲಯ, ಸಂಡೂರು ಕುರಿತು ಎರಡು ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಕಾರ್ಯಕ್ರಮವನ್ನು ಜ.30 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿ.ಪಿ.ಎಸ್.ಸಿ ಶಾಲೆಯ ಶರಣ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ವಿಶಿಷ್ಟ ವಸ್ತು, ಘಟನೆ, ವ್ಯಕ್ತಿ ಸಂಧರ್ಭ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಮಹತ್ವವನ್ನು ಪ್ರಚುರ ಪಡಿಸಲು ವಿಶೇಷ ಅಂಚೆ ಲಕೋಟೆಗಳನ್ನು ಅಂಚೆ ಇಲಾಖೆಯು ಕಾಲಕಾಲಕ್ಕೆ ಬಿಡುಗಡೆಗೊಳಿಸುತ್ತಲಿದೆ. ವಿಶೇಷ ಅಂಚೆ ಲಕೋಟೆಯನ್ನು ಭಾರತೀಯ ಅಂಚೆ ಸೇವೆಯ ಉತ್ತರ ಕರ್ನಾಟಕ ವಲಯದ ಅಂಚೆ ನಿರ್ದೇಶಕರಾದ ವಿ.ತಾರಾರವರು ಬಿಡುಗಡೆ ಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಟಿ.ಎ.ಹೆಚ್.ಆರ್.ಡಿ ಸಂಸ್ಥೆ ಮತ್ತು ಬಿ.ಪಿ.ಎಸ್ ಶಾಲೆಯ ಅಧ್ಯಕ್ಷರಾದ ಡಾ.ಎಸ್.ಜೆ.ವಿಮಹಿಪಾಲ್, ಟಿ.ಎ.ಹೆಚ್.ಆರ್.ಡಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಯಶವಂತ್ ಭೂಪಾಲ್, ಕುಮಾರಸ್ವಾಮಿ ದೇವಸ್ಥಾನದ ಟ್ರಸ್ಟಿ ಬಹಿರ್ ಜೀ ಅಜಯ್ ಘೋರ್ಪಡೆ, ಕಾರ್ಯದರ್ಶಿ ಪ್ರಾಣೇಶ್ ಆಚಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು, ಜಿಲ್ಲೆಯ ಎಲ್ಲಾ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸಿಗರು, ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದ ಭಕ್ತರು, ಬಸವರಾಜೇಶ್ವರಿರವರ ಅಭಿಮಾನಿಗಳು ಹಾಗೂ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಸಸ್ವಿಗೊಳಿಸಬೇಕು ಎಂದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷರಾದ ವಿ.ಎಲ್.ಚಿತ್‍ಕೋಟೆ ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ