ಗುರುವಾರ, ಜನವರಿ 18, 2024

ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ

ಬಳ್ಳಾರಿ,ಜ.18(ಕರ್ನಾಟಕ ವಾರ್ತೆ): ನಗರದ ಹಿರಿಯಾಳಕುಡಂನ ಈದ್ಗಾ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಗೆ 2024-25ನೇ ಸಾಲಿನ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಮುಖ್ಯ ಗುರುಗಳಾದ ಎಂ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈಗ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಬಳ್ಳಾರಿ ಪೂರ್ವ ಮತ್ತು ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಅಂತರ ಜಾಲದಲ್ಲಿ (ಆನ್‍ಲೈನ್) WWW.schooleducation.kar.nic.in ಅಥವಾ WWW.vidyavahini.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 06 ಕೊನೆಯ ದಿನ ಆಗಿರುತ್ತದೆ. ಈ ವರ್ಷ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವುದಿಲ್ಲ. ಆದ್ದರಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಅರ್ಜಿ ತುಂಬುವಾಗ ವಿದ್ಯಾರ್ಥಿಗಳು ತಮ್ಮ ಪೆÇೀಷಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ. ಆದ್ದರಿಂದ ಸೈಬರ್ ಸೆಂಟರ್ ಅವರ ಮೊಬೈಲ್ ನಂಬರ್ ಹಾಕಬಾರದು. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಪಾಲಕರು ತಮ್ಮ ಮಕ್ಕಳ ಶಾಲೆಯ ಎಸ್.ಟಿ.ಎಸ್ ನಲ್ಲಿ ದಾಖಲಾತಿ ಮಾಹಿತಿಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಎಸ್.ಎ.ಟಿ.ಎಸ್ ನಂಬರ್ ಎಂಟ್ರಿ ಮಾಡಿದ ತಕ್ಷಣ ಮಾಹಿತಿ ಅರ್ಜಿ ಫಾರ್ಮನಲ್ಲಿ ಅಪ್‍ಲೋಡ್ ಆಗುತ್ತದೆ. ತಪ್ಪು ಮಾಹಿತಿ ಸಲ್ಲಿಸಿದರೆ ದಾಖಲಾತಿ ಆಗುವುದಿಲ್ಲ. ಅದಕ್ಕೆ ಪಾಲಕರೇ ಹೊಣೆಗಾರರಾಗಿರುತ್ತಾರೆ. 6ನೇ ತರಗತಿಗೆ ಪ್ರವೇಶ ಪರೀಕ್ಷೆಯು ಮಾರ್ಚ್ 03 ರಂದು ನಡೆಯುತ್ತದೆ. ಆಯ್ಕೆ ಪರೀಕ್ಷೆಗೆ 3 ರಿಂದ 5ನೇ ಪಠ್ಯಪುಸ್ತಕಗಳನ್ನು ಆಧರಿಸಿ ಕನ್ನಡ - ಶೇ.16, ಇಂಗ್ಲೀಷ್ - ಶೇ.16, ಗಣಿತ - ಶೇ.16, ವಿಜ್ಞಾನ - ಶೇ.16, ಸಮಾಜ - ಶೇ.16, ಸಾಮಾನ್ಯ ಜ್ಞಾನ (ಜಿ.ಕೆ) - ಶೇ.10, ಬೌದ್ದಿಕ ಸಾಮಾಥ್ರ್ಯ - ಶೇ.10 ಇವುಗಳನ್ನು ಪರಿಗಣಿಸಲಾಗುವುದು. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು, ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ. *ಅಗತ್ಯ ದಾಖಲೆಗಳು:* ವಿದ್ಯಾರ್ಥಿಯ ಎಸ್.ಎ.ಟಿ.ಎಸ್. ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ (ಪ್ರಸ್ತುತ ಚಾಲ್ತಿಯಲ್ಲಿರುವ), ಆಧಾರ್ ಕಾರ್ಡ್ (ಸ್ಕ್ಯಾನ್ ಮಾಡಲು), ಪಾಸ್‍ಪೆÇೀರ್ಟ್ ಸೈಜ್ 1 ಪೆÇೀಟೋ, ವ್ಯಾಸಂಗ ದೃಢೀಕರಣ ಪತ್ರ , ವಾಸ ಸ್ಥಳ ದೃಢೀಕರಣ ಪತ್ರ, ವಿಶೇಷ ಮೀಸಲಾತಿ ಪ್ರಮಾಣ ಪತ್ರ (ಅಂಗವಿಕಲರಿಗೆ ಮಾತ್ರ), ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖ್ಯ ಗುರುಗಳ ಮೊಬೈಲ್ ಸಂಖ್ಯೆ, ವಾಸಸ್ಥಳ ಪ್ರಮಾಣ ಪತ್ರವನ್ನು ಬೇರೆ ತಾಲ್ಲೂಕು ಹಾಗೂ ಹೊರ ರಾಜ್ಯಗಳಲ್ಲಿ ಕಲಿಯುತ್ತಿರುವ ಬಳ್ಳಾರಿ ಪೂರ್ವ ವಲಯ ಮತ್ತು ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿನ ತಾಲ್ಲೂಕಿನ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಪಶ್ಚಿಮ ವಲಯ ಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಅವರ ಮೊ.9480695067 ಮತ್ತು ಆದರ್ಶ ವಿದ್ಯಾಲಯ ಶಾಲೆಯ ಮುಖ್ಯಗುರುಗಳಾದ ಕುಮಾರಸ್ವಾಮಿ ಅವರ ಮೊ.9449463870 ಇವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ