ಸೋಮವಾರ, ಜನವರಿ 22, 2024
ವಿದ್ಯುತ್ ವ್ಯತ್ಯಯ ಜ.24 ರಂದು
ಬಳ್ಳಾರಿ,ಜ.22(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ 110ಕೆ.ವಿ ಅಲ್ಲಿಪುರ-ಬಳ್ಳಾರಿ ಉತ್ತರ ಮಾರ್ಗದ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಸೋಮಸಮುದ್ರ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ಗುಡದೂರು ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೆ.ವಿ ಮಾರ್ಗಗಳಲ್ಲಿ ಜ.24 ರಂದು ಬೆಳಿಗ್ಗೆ 08 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ ಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-1 ಎನ್.ಜೆ.ವೈ ಬಾಲಾಜಿ ನಗರ್ ಕ್ಯಾಂಪ್ ಮಾರ್ಗದ ಕೊರ್ಲಗುಂದಿ, ವಿಜಯನಗರ ಕ್ಯಾಂಪ್, ಜಾಲಿಬೆಂಜಿ, ಬಾಲಾಜಿ ನಗರ ಕ್ಯಾಂಪ್, ಜ್ಯಾಲಿಬೆಂಜಿ ಗ್ರಾಮ. ಎಫ್-2 ಐ.ಪಿ ಸೆಟ್ ಫೀಡರ್ ಸೋಮಸಮುದ್ರ ಮಾರ್ಗದ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೋಳೂರು, ಮದಿರೆ, ಕೊಳಗಲ್ಲು, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್ ಹಾಗೂ ಮುಂತಾದ ಗ್ರಾಮಗಳು.
ಎಫ್-3 ಶ್ರೀಧರಗಡ್ಡೆ ಎನ್.ಜೆ.ವೈ ಫೀಡರ್ ಮಾರ್ಗದ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೋಳೂರು, ಮದಿರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್ ಹಾಗೂ ಗ್ರಾಮಗಳು. ಕೋಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್, ವಿ.ಟಿ.ಕ್ಯಾಂಪ್. ಎಫ್-4 ಐ.ಪಿ ಸೆಟ್ ಕೊರ್ಲಗುಂದಿ ಫೀಡರ್ ಮಾರ್ಗದ ಕೊರ್ಲಗುಂದಿ, ಬಾಲಾಜಿನಗರ ಕ್ಯಾಂಪ್, ಜ್ಯಾಲಿಬೆಂಜಿ, ಶ್ರೀಧರಗಡ್ಡ, ವಿಜಯನಗರ ಕ್ಯಾಂಪ್. ಎಫ್-5 ಡಾಕ್ಟರ್ ಕ್ಯಾಂಪ್ ಮಾರ್ಗದ ಶ್ರೀಧರಗಡ್ಡೆ, ಗುಡಾರ್ ನಗರ.
ಎಫ್-01 ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಗ್ರಾಮ. ಎಫ್-02 ಗುಡುದೂರು ಐಪಿ ಮಾರ್ಗದ ಗುಡುದೂರು, ಹಂದಿಹಾಳ್ ಗ್ರಾಮ. ಎಫ್-03 ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್, ಚಾನಾಳ್ ಗ್ರಾಮ. ಎಫ್-04 ಗುಡುದೂರು ಎನ್.ಜೆ.ವೈ ಮಾರ್ಗದ ಹಂದಿಹಾಳ್, ಚಾನಾಳ್, ಗುಡದೂರು ಗ್ರಾಮಗಳು. ಎಫ್-05 ಚಾನಾಳ್ ಐಪಿ ಮಾರ್ಗದ ಚಾನಾಳ್ ಗ್ರಾಮ.
ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ