ಗುರುವಾರ, ಜನವರಿ 25, 2024
ಜ.26 ರಂದು “ಸಮಾನತೆಯ ಕಡೆಗೆ” ಚಲನಚಿತ್ರ ಪ್ರಸಾರ; ಸಾರ್ವಜನಿಕರು ವೀಕ್ಷಿಸಲು ಮನವಿ
ಬಳ್ಳಾರಿ,ಜ.25(ಕರ್ನಾಟಕ ವಾರ್ತೆ):
ಸಮಾಜ ಕಲ್ಯಾಣ ಇಲಾಖೆಯ ಪ್ರಾಯೋಜಕತ್ವದಲ್ಲಿ ಅಸ್ಪøಶ್ಯತೆ ನಿವಾರಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜ.26 ರಂದು ಗಣರಾಜ್ಯೋತ್ಸವ ದಿನದಂದು ಮಧ್ಯಾಹ್ನ 02.30 ರಿಂದ ಸಂಜೆ 04.30 ರ ವರೆಗೆ ಚಂದನ ವಾಹಿನಿಯಲ್ಲಿ “ಸಮಾನತೆಯ ಕಡೆಗೆ” ಎಂಬ ಚಲನಚಿತ್ರವನ್ನು ಪ್ರಸಾರ ಮಾಡಲಾಗುತಿದ್ದು, ಎಲ್ಲಾ ಸಾರ್ವಜನಿಕರು ಚಲನಚಿತ್ರವನ್ನು ವೀಕ್ಷಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ