ಬುಧವಾರ, ಜನವರಿ 24, 2024

ಅನಾಮಧೇಯ ಮೃತ ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಜ.24(ಕರ್ನಾಟಕ ವಾರ್ತೆ): ನಗರದ ಕಂಟೋನ್‍ಮೆಂಟ್ ಮತ್ತು ನಗರ ರೈಲು ನಿಲ್ದಾಣಗಳ ಮಧ್ಯೆ ಡೌನ್ ರೈಲು ಹಳಿಯಲ್ಲಿ ಅನಾಮಧೇಯ ವ್ಯಕ್ತಿಯು ಜೀವನದಲ್ಲಿ ಜಿಗುಪ್ಸೆಗೊಂಡು ಚಲಿಸುವ ರೈಲುಗಾಡಿಗೆ ಆತ್ಮಹತ್ಯೆ ಮಾಡಿಕೊಂಡು ಜ.23 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಸುಮಾರು 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಅಗಲವಾದ ಮುಖ, ಸಣ್ಣ ಕಿವಿಗಳು, ಮಂಡು ಮೂಗು ಇರುತ್ತದೆ. ತಲೆಯಲ್ಲಿ ಸುಮಾರು 01 ಇಂಚು ಉದ್ದದ ಕಪ್ಪು ಕೂದಲು ಹಾಗೂ ಅರ್ಧ ಇಂಚು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ. ಬಲಗೈಯ ಮುಂಗೈಗೆ ಕನ್ನಡದಲ್ಲಿ ಅಮ್ಮ, ಅಪ್ಪ ಎಂದು ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಮೃತನ ಮೈಮೇಲಿನ ಬಟ್ಟೆಗಳು: ಬಿಳಿ ಬಣ್ಣದ ಆಫ್ ಬನಿಯನ್, ಆರೆಂಜ್ ಬಣ್ಣದ ಒಳಉಡುಪು, ಹಸಿರು ಬಣ್ಣದ ಚೆಕ್ಸ್ ಗೆರೆಯುಳ್ಳ ಲುಂಗಿ, ಕೆಂಪು ಬಣ್ಣದ ಉಡುದಾರ, ಬಲಗೈ ತೋಳಿನಲ್ಲಿ ಕೆಂಪು ಬಣ್ಣದ ಬಿಳಿ ಮಣಿ ಇರುವ ದಾರ, ಬಲಗೈನಲ್ಲಿ ತೋರುಬೆರಳಿಗೆ ತಾಮ್ರದ ಉಂಗುರ ಇರುತ್ತದೆ. ಮೇಲ್ಕಂಡ ಚಹರೆಯುಳ್ಳ ಅನಾಮಧೇಯ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಮೊ.9480802131 ಹಾಗೂ ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ