ಮಂಗಳವಾರ, ಜನವರಿ 16, 2024
ಜ.17 ರಿಂದ ಸಂಡೂರಿನಿಂದ ಬೆಂಗಳೂರಿಗೆ ಪ್ರತಿಷ್ಠಿತ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ
ಬಳ್ಳಾರಿ,ಜ.16(ಕರ್ನಾಟಕ ವಾರ್ತೆ):
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ಸಂಡೂರು ಘಟಕದಿಂದ ಸಂಡೂರಿನಿಂದ ಬೆಂಗಳೂರಿಗೆ (ವಯಾ ದೋಣಿಮಲೈ, ವಿದ್ಯಾನಗರ, ತೋರಣಗಲ್ಲು, ಕುಡುತಿನಿ, ಬಳ್ಳಾರಿ, ಚಳ್ಳಕೆರೆ ಮಾರ್ಗದಲ್ಲಿ) ಜ.17 ರಿಂದ ಪ್ರತಿಷ್ಠಿತ ಎ/ಸಿ ಸ್ಲೀಪರ್ ನೂತನ ಬಸ್ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.
*ಸಂಚರಿಸುವ ವೇಳೆ:*
ಸಂಡೂರಿನಿಂದ ರಾತ್ರಿ 09.30 ಕ್ಕೆ ಹೊರಟು, ದೋಣಿಮಲೈಗೆ ರಾತ್ರಿ 10.15 ಕ್ಕೆ, ವಿದ್ಯಾನಗರ(ಜೆಎಸ್‍ಡಬ್ಲ್ಯೂ)ಕ್ಕೆ ರಾತ್ರಿ 10.35 ಕ್ಕೆ, ಬಳ್ಳಾರಿಗೆ ರಾತ್ರಿ 11.30 ಕ್ಕೆ ಆಗಮಿಸಿಸಲಿದೆ. ಬೆಂಗಳೂರಿಗೆ ಬೆಳಿಗ್ಗೆ 06 ಗಂಟೆಗೆ ತಲುಪಲಿದೆ.
*ಪ್ರಯಾಣ ದರ:*
ಸಂಡೂರಿನಿಂದ ರೂ.1,000, ದೋಣಿಮಲೈನಿಂದ ರೂ.960, ವಿದ್ಯಾನಗರ(ಜೆಎಸ್‍ಡಬ್ಲ್ಯೂ)ನಿಂದ ರೂ.920 ಹಾಗೂ ಬಳ್ಳಾರಿಯಿಂದ ರೂ.830 ಇರಲಿದೆ.
ಬೆಂಗಳೂರಿನಿಂದ ರಾತ್ರಿ 10.30 ಕ್ಕೆ ಹೊರಟು, ಬಳ್ಳಾರಿಗೆ ಬೆಳಿಗ್ಗೆ 05.45 ಕ್ಕೆ ಆಗಮಿಸಲಿದೆ. ವಿದ್ಯಾನಗರ(ಜೆಎಸ್‍ಡಬ್ಲ್ಯೂ)ಕ್ಕೆ ಬೆಳಿಗ್ಗೆ 06.30 ಕ್ಕೆ, ದೋಣಿಮಲೈಗೆ ಬೆಳಿಗ್ಗೆ 07 ಗಂಟೆಗೆ ಹಾಗೂ ಸಂಡೂರಿಗೆ ಬೆಳಿಗ್ಗೆ 07.30 ಕ್ಕೆ ಆಗಮಿಸಲಿದೆ.
ಮುಂಗಡ ಆಸನಗಳನ್ನು ಆನ್‍ಲೈನ್‍ನ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಕಾಯ್ದಿರಿಸಬಹುದು. ಪ್ರತಿಷ್ಠಿತ ಎ/ಸಿ ಸ್ಲೀಪರ್ ನೂತನ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ