ಗುರುವಾರ, ಜನವರಿ 18, 2024

ಬಳ್ಳಾರಿ ಮಹಾನಗರ ಪಾಲಿಕೆ: ಅಂಗಡಿ ಮಾಲೀಕರು, ಬೀದಿಬದಿ ವ್ಯಾಪರಸ್ಥರು ಫುಟ್‍ಪಾಥ್, ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದರೆ ತೆರವುಗೊಳಿಸಿ

ಬಳ್ಳಾರಿ,ಜ.18(ಕರ್ನಾಟಕ ವಾರ್ತೆ): ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಹಾಗೂ ಬೀದಿಬದಿ ವ್ಯಾಪರಸ್ಥರು ಫುಟ್‍ಪಾಥ್ ಮತ್ತು ರಸ್ತೆಬದಿ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವುದನ್ನು ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್ ಅವರು ತಿಳಿಸಿದ್ದಾರೆ. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಬೆಂಗಳೂರು ರಸ್ತೆ, ರಾಯಲ್ ಸರ್ಕಲ್‍ನಿಂದ ಬಂಡಿಮೋಟ್‍ವರೆಗೆ, ಕಾರ್ ಬೀದಿ, ಕಣೇಕಲ್ ಬಸ್‍ನಿಲ್ದಾಣದಿಂದ ಮೋತಿ ವೃತ್ತದವರೆಗೆ ಗ್ರಹಂರಸ್ತೆ ಮತ್ತು ಕಾಳಮ್ಮ ರಸ್ತೆಗಳು ತುಂಬಾ ಪಾದಾಚಾರಿಗಳು ಹಾಗೂ ವಾಹನಗಳು ಓಡಾಡುವ ರಸ್ತೆಗಳಾಗಿದ್ದು, ಈ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಸ್ಥರು ಫುಟ್‍ಬಾತ್ ಮತ್ತು ರಸ್ತೆಬದಿ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವುದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಹಾನಗರಪಾಲಿಕೆಗೆ ಅನೇಕ ದೂರುಗಳು ಬಂದಿರುತ್ತವೆ. ಎಲ್ಲಾ ವ್ಯಾಪಾರಸ್ಥರಿಗೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಈ ರಸ್ತೆಗಳಲ್ಲಿ ಫುಟ್‍ಬಾತ್ ಮತ್ತು ರಸ್ತೆಬದಿ ಅತಿಕ್ರಮಿಸದಂತೆ ಸೂಚಿಸಲಾಗಿದೆ. ಯಾರಾದರೂ ಅತಿಕ್ರಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಕಂಡುಬಂದಲ್ಲಿ ತೆರವುಗೊಳಿಸಿ, ದಂಡವಿಧಿಸಿ ರಸ್ತೆ ಬದಿ ಮತ್ತು ಫುಟ್‍ಬಾತ್ ಮೇಲೆ ಇಟ್ಟ ವಸ್ತುಗಳನ್ನು ಜಪ್ತಿ ಮಾಡಲಾಗುವುದು. ಪೆÇಲೀಸ್ ಇಲಾಖೆಯ ಸಹಕಾರದೊಂದಿಗೆ ಜ.20 ರಂದು ತೆರವು ಕಾರ್ಯಚರಣೆ ಹಮ್ಮಿಕೊಳ್ಳಲಾಗುವುದು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ