ಸೋಮವಾರ, ಜನವರಿ 1, 2024
ಜ.03ರಂದು ಹೆಚ್‍ಟಿ ಮತ್ತು ಇಹೆಚ್‍ಟಿ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ
ಬಳ್ಳಾರಿ,ಜ.01(ಕರ್ನಾಟಕ ವಾರ್ತೆ):
ನಗರ ಜೆಸ್ಕಾಂ ಉಪ ವಿಭಾಗ 1 ಮತ್ತು 2 ರ ಹೆಚ್‍ಟಿ ಮತ್ತು ಇಹೆಚ್‍ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಸಭೆಯಲ್ಲಿ ಜ.03ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಲಯ ಕಚೇರಿಯ ಮೊದಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬಳ್ಳಾರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಲಯದ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಲ್ಲಾ ಹೆಚ್‍ಟಿ ಮತ್ತು ಇಹೆಚ್‍ಟಿ ವಿದ್ಯುತ್ ಗ್ರಾಹಕರು ಭಾಗವಹಿಸಿ ವಿದ್ಯುತ್ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ