ಸೋಮವಾರ, ಜನವರಿ 1, 2024
ಯುವತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜ.01(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ಹೊಸ ದೇವಲಾಪುರ ಗ್ರಾಮದ ನಿವಾಸಿ ದೀಪಿಕ ತಂದೆ ಹನುಮಂತಪ್ಪ ಎನ್ನುವ 21 ವರ್ಷದ ಯುವತಿ ಡಿ.30ರಂದು ತಮ್ಮ ಮನೆಯಿಂದ ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಯುವತಿಯ ಚಹರೆ ಗುರುತು: ಎತ್ತರ 5.4 ಅಡಿ, ಸಾಧಾರಣ ಮೈಕಟ್ಟು, ಕೆಂಪನೇ ಮೈಬಣ್ಣ, ದುಂಡುಮುಖ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಚೂಡಿದಾರ ಟಾಪ್ ಮತ್ತು ವೇಲು ಹಾಗೂ ಕಪ್ಪು ಬಣ್ಣದ ಲೆಗ್ಗಿನ್ ಧರಿಸಿರುತ್ತಾಳೆ.
ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‍ಐ ದೂ.08392-220333, ಸಿರುಗುಪ್ಪ ವೃತ್ತ ಸಿಪಿಐ ದೂ.08396-220003, ಸಿರುಗುಪ್ಪ ಉಪವಿಭಾಗ ಡಿಎಸ್‍ಸಿ ದೂ.08392-276000 ಹಾಗೂ ಬಳ್ಳಾರಿ ಎಸ್‍ಪಿ ಅವರ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ