ಗುರುವಾರ, ಜನವರಿ 11, 2024
ಜ.29 ರಂದು ನಿಧಿ ಆಪ್ಕೆ ನಿಕಟ್
ಬಳ್ಳಾರಿ,ಜ.11(ಕರ್ನಾಟಕ ವಾರ್ತೆ):
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ ಎಂಬ ಆಶಯದಡಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಜ.29 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಗರದ ಕಂಟೋನ್‍ಮೆಂಟ್‍ನ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರ್ ಮಹಾವಿದ್ಯಾಲಯಲ್ಲಿ ಏರ್ಪಡಿಸಲಾಗಿದೆ.
ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಕ್ಕೆ ವಿಶಾಲ ವೇದಿಕೆಯಾಗಿದ್ದು, ಅರಿವು ಮೂಡಿಸುವ ಮತ್ತು ಪ್ರಭಾವ ಬೀರುವ ಕಾರ್ಯಕ್ರಮವಾಗಿದೆ.
ಕಾರ್ಮಿಕರ, ಪ್ರಧಾನ ಉದ್ಯೋಗದಾತರ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ಆನ್‍ಲೈನ್ ಸೇವೆಗಳ, ಹೊಸ ಉಪಕ್ರಮ, ಸುಧಾರಣೆಗಳ ಮಾಹಿತಿ ಒದಗಿಸಲಾಗುತ್ತದೆ. ಉದ್ಯೋಗದಾರರ ಕರ್ತವ್ಯ, ಜವಾಬ್ದಾರಿಗಳ ಅರಿವು ಮೂಡಿಸುವ ಕೆಲಸವಾಗುತ್ತದೆ.
ಎಲ್ಲಾ ಕಾರ್ಮಿಕರು, ಪಿಂಚಣಿದಾರರು, ಉದ್ಯೋಗದಾತರು ಜ.29 ರಂದು ನಡೆಯುವ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ