ಬುಧವಾರ, ಜನವರಿ 10, 2024

ರಸ್ತೆ ಅಪಘಾತ: ಜಿಲ್ಲಾಡಳಿತದಿಂದ ಸಂಪರ್ಕ

ಬಳ್ಳಾರಿ,ಜ.10(ಕರ್ನಾಟಕ ವಾರ್ತೆ): ಬಳ್ಳಾರಿಯಿಂದ ಶಬರಿಮಲೆಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಮಾಲಾಧಾರಿಗಳ ಬಸ್ ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಕೀಲಕರೈ ಗ್ರಾಮದ ಪುಲ್ಲಂಧೈ ಬಳಿ ನಿನ್ನೆ ರಾತ್ರಿ 1.20 ರ ಸುಮಾರಿಗೆ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನುಳಿದ 14 ಜನರು ರಾಮನಾಥಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ರಾಮನಾಥಪುರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಚಿಕಿತ್ಸೆ ವ್ಯವಸ್ಥೆ ಒದಗಿಸಲು ಕೋರಿರುತ್ತಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ