ಶುಕ್ರವಾರ, ಜನವರಿ 5, 2024

ತಾಯಿ, ಮಗು ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಜ.05(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲ್ಲೂಕಿನ ಗುಂಡಿಗನೂರು ಗ್ರಾಮ ನಿವಾಸಿಯಾದ ಲಕ್ಷ್ಮೀ ಎನ್ನುವ 22 ವರ್ಷದ ಮಹಿಳೆ ಮತ್ತು ತನ್ನ ಮಗಳಾದ ಬಿ.ಸವಿತಾ ಎನ್ನುವ ಎರಡುವರೆ ವರ್ಷದ ಮಗು ಡಿ.31 ರಂದು ಕಾಣೆಯಾಗಿರುವ ಕುರಿತು ಸಿರಿಗೇರಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಎಎಸ್‍ಐ ಅವರು ತಿಳಿಸಿದ್ದಾರೆ. ಲಕ್ಷ್ಮೀ ಚಹರೆ ಗುರುತು: ಎತ್ತರ 5 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಳದಿ ಮತ್ತು ಗುಲಾಬಿ ಬಣ್ಣದ ಸೀರೆ ಹಾಗು ಕೆಂಪು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮಗು ಬಿ.ಸವಿತಾ ಚಹರೆ ಗುರುತು: ಎತ್ತರ ಎರಡುವರೆ ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಮತ್ತು ಸಿಮೆಂಟ್ ಬಣ್ಣದ ಚಿತ್ರವಿರುವ ಫ್ರಾಕ್ ಧರಿಸಿರುತ್ತಾಳೆ. ಈ ಮೇಲ್ಕಂಡ ಚಹರೆಯುಳ್ಳ ಕಾಣೆಯಾದ ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೆÇೀಲಿಸ್ ಠಾಣೆ ದೂ.08396-244426, ಮೊ.9480803056 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ