ಶುಕ್ರವಾರ, ಜನವರಿ 5, 2024
ತೋಟಗಾರಿಕೆಯಿಂದ ಪರಿಸರವು ಸುಂದರ: ಉಪಮೇಯರ್ ಬಿ.ಜಾನಕಿ
ಬಳ್ಳಾರಿ,ಜ.05(ಕರ್ನಾಟಕ ವಾರ್ತೆ):
ತೋಟಗಾರಿಕೆ ಕ್ಷೇತ್ರವು ಆರ್ಥಿಕತೆಗೆ ಕೊಡುಗೆ ನೀಡುತ್ತದೆ, ಉತ್ತಮ ಪೆÇೀಷಣೆಯನ್ನು ನೀಡುತ್ತದೆ. ತೋಟಗಾರಿಕೆಯು ಪರಿಸರವನ್ನು ಸ್ವಚ್ಛ ಸುಂದರಗೊಳಿಸುತ್ತದೆ ಮತ್ತು ಹೆಚ್ಚಿಸುತ್ತದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಉಪಮೇಯರ್ ಬಿ.ಜಾನಕಿ ಅವರು ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಕುರಿತಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಬೇಸಿಗೆಯು ಆರಂಭವಾಗಲಿದೆ. ಬಳ್ಳಾರಿಯ ಬಿಸಿಲು ನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡಬೇಕು ಮತ್ತು ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ಲ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಲಯದಲ್ಲಿ ಆಗಿರುವ ಆವಿಷ್ಕಾರಗಳ ಕುರಿತಂತೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ಪ್ರಮುಖವಾಗಿ ತೋಟಗಾರಿಕೆ ಮಹತ್ವ, ವಿಭಾಗಗಳು, ಕೈತೋಟ ಮತ್ತು ತಾರಸಿತೋಟ, ಹೈಡ್ರೋಪೆÇೀನಿಕ್ಸ್, ಸಸ್ಯಾಭಿವೃದ್ಧಿ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಬುನಾದಿ ವಿಷಯ ಸೇರಿದಂತೆ ತೋಟಗಾರಿಕೆ ಮಾಹಿತಿ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶಮೀಮ್ ಜರಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಈರಮ್ಮ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಸುಲೇಖಾ, ಉಪ ಪ್ರಾಚಾರ್ಯ ಜಾಯ್ ದೆಬೋರಾ, ಬಳ್ಳಾರಿ ತಾಲ್ಲೂಕಿನ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಯ್ ಮುರ್ ರೆಹಮಾನ್ ಸೇರಿದಂತೆ ಶಾಲೆಯ ಎಸ್‍ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ