ಗುರುವಾರ, ಜನವರಿ 4, 2024
ಖ್ಯಾತ ಸಂಗೀತ ಗಾಯಕರಾದ ವಿಜಯ್ ಪ್ರಕಾಶ್, ರಘು ದೀಕ್ಷಿತ್ ಅವರ ರಸಮಂಜರಿ ಕಾರ್ಯಕ್ರಮ ರದ್ದು
ಬಳ್ಳಾರಿ,ಜ.04(ಕರ್ನಾಟಕ ವಾರ್ತೆ):
ನಗರದಲ್ಲಿ ಜ.06 ಮತ್ತು 07 ರಂದು ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಗಾಯಕರಾದ ವಿಜಯ್ ಪ್ರಕಾಶ್, ರಘು ದೀಕ್ಷಿತ್ ಅವರ ರಸಮಂಜರಿ ಕಾರ್ಯಕ್ರಮವು ಅನಿವಾರ್ಯ ಕಾರಣಗಳಿಂದ ರದ್ದುಗೊಂಡಿದೆ. ಉಳಿದಂತೆ, ಇನ್ನಿತರೆ ಸಾಂಸ್ಕøತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದ್ಯಗಳು, ಜನಪದ ನೃತ್ಯ, ಜನಪದ ಗೀತೆಯಂತಹ ಯುವ ಪ್ರತಿಭೆ ಅನಾವರಣಗೊಳ್ಳಲಿವೆ. ಜೊತೆಗೆ ಭಾಷಣ ಸ್ಪರ್ಧೆ, ಕಥೆ ಬರೆಯುವ ಸ್ಪರ್ಧೆ, ಛಾಯಾಚಿತ್ರಗ್ರಹಣ, ಪೆÇೀಸ್ಟರ್ ತಯಾರಿಕೆಗಳಂತಹ ಸೃಜನಶೀಲ ಕಾರ್ಯಕ್ರಮ ಇರಲಿವೆ. ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ