ಶುಕ್ರವಾರ, ಜನವರಿ 5, 2024
‘ಯುವನಿಧಿ’ ಯೋಜನೆ; ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ
ಬಳ್ಳಾರಿ,ಜ.05(ಕರ್ನಾಟಕ ವಾತೆ):
ಜಿಲ್ಲೆಯಲ್ಲಿ 2023ರಲ್ಲಿ ತೇರ್ಗಡೆಗೊಂಡ ಅರ್ಹ ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಪದವೀಧರರು ‘ಯುವನಿಧಿ’ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಯುವನಿಧಿ’ ಯೋಜನೆಯಡಿ ನೋಂದಾವಣಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಯುವನಿಧಿ’ ಯೋಜನೆಯಡಿಲ್ಲಿ ಪದವಿ ಪಾಸಾದವರಿಗೆ ರೂ.3000 ಮತ್ತು ಡಿಪ್ಲೋಮಾ ಪಾಸಾದವರಿಗೆ ರೂ.1500ಗಳನ್ನು ನೀಡುವ ಯೋಜನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ಲಾಭ ಪಡೆಯಲು ಜಿಲ್ಲೆಯ ಅರ್ಹತೆ ಹೊಂದಿರುವ ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಅರ್ಹತೆ ಹೊಂದಿರುವ ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಪದವೀಧರರು ಯಾರೂ ಸಹ ವಚಿತರಾಗದಂತೆ ಎಲ್ಲರೂ ನೋಂದಾಯಿಸಿಕೊಳ್ಳುವಂತೆ ಎಲ್ಲಾ ಪದವಿ ಕಾಲೇಜು ಮತ್ತು ಡಿಪ್ಲೋಮೊ ಕಾಲೇಜು ಪ್ರಾಂಶುಪಾಲರು ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
2023ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯಾ ಕಾಲೇಜಿನ ಪ್ರಾಂಶುಪಾಲರು ಯುವನಿಧಿ ಯೋಜನೆಗೆ ಆನ್‍ಲೈನ್‍ನಲ್ಲಿ (ಸೇವಾ ಸಿಂಧು ಪೋರ್ಟಲ್ / ಅಟಲ್‍ಜೀ ಕೇಂದ್ರ / ಕರ್ನಾಟಕ-1 / ಬಳ್ಳಾರಿ-1 ಮತ್ತು ಇತರೆ ಸೇವಾ ಕೇಂದ್ರ) ಗಳಲ್ಲಿ ಅರ್ಜಿ ಸಲ್ಲಿಸಲು ಸೂಚಿಸಬೇಕು.
ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು. ಇದ್ದಕ್ಕಾಗಿ ಕಾಲೇಜು ಹಂತದಲ್ಲಿ ಮತ್ತು ವಿಶ್ವಾವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಕ್ಯಾಂಪ್ ಮಾಡಬೇಕು. ಅಲ್ಲದೇ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಎಸ್.ಎಂ.ಎಸ್ ಮೂಲಕ 2023ರಲ್ಲಿ ಪದವಿ / ಡಿಪ್ಲೋಮಾ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪುವಂತೆ ಪ್ರಚಾರ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ಮಾತನಾಡಿ, 2023ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು, ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ / ಡಿಪ್ಲೋಮಾದವರೆಗೆÉ ಅಧ್ಯಯನ ಮಾಡಿದವರು) ಯುವನಿಧಿ ಯೋಜನೆಗೆ ನೊಂದಾಯಿಸಲು ಅರ್ಹರು ಎಂದು ತಿಳಿಸಿದರು.
2023ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಎನ್.ಎ.ಡಿ (ನ್ಯಾಷನಲ್‍ಅಕ್ಯಾಡೆಮಿಕ್ ಡಿಪಾಸಿಟರಿ) ಪೋರ್ಟಲ್‍ನಲ್ಲಿ ಕಾಲೋಚಿತಗೊಳಿಸುವುದು. ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ, ಪಿ.ಯು.ಸಿ. ಪ್ರಮಾಣ ಪತ್ರ, ಪದವಿ / ಡಿಪ್ಲೋಮಾ ಪ್ರಮಾಣ ಪತ್ರ ಹಾಗೂ ಇತರೆ ಪೂರಕ ದಾಖಲೆ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ