ಶನಿವಾರ, ಮೇ 6, 2023
ಅಪರಿಚಿತ ಮಹಿಳಾ ಶವದ ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ*
ಬಳ್ಳಾರಿ, ಮೇ 05(ಕರ್ನಾಟಕ ವಾರ್ತೆ):
ನಗರದ ಹೊಸಪೇಟೆ ರಸ್ತೆಯಲ್ಲಿರುವ ಕಿಯಾ ಶೋ ರೂಂ ರಸ್ತೆಯ ಎಡ ಬದಿಯಲ್ಲಿ ಸುಮಾರು 30 ವರ್ಷದ ಅಪರಿಚಿತ ಮಹಿಳೆ ಮೇ 03 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಎತ್ತರ ಸುಮಾರು 4.8 ಅಡಿ, ಗೋಧಿ ಮೈಬಣ್ಣ, ಹಣೆಯ ಮೇಲೆ ದುಂಡನೆಯ ಹಚ್ಚೆ, ಬಲ ಮತ್ತು ಎಡ ಕೈಗಳಲ್ಲಿ ಹೂವಿನ ಡಿಜೈನ್ ಇರುವ ಹಚ್ಚೆ ಹಾಕಿಸಿಕೊಂಡಿದ್ದು, ಕುತ್ತಿಗೆಯಲ್ಲಿ ತಾಯತ ಇರುತ್ತದೆ. ಹೊಂದಿರುತ್ತಾಳೆ. ಮೃತ ಮಹಿಳೆ ಪಿಂಕ್ ಕಲರ್‍ನ ಡಿಜೈನ್‍ವುಳ್ಳ ಸೀರೆ ಹಾಗೂ ಕುಪ್ಪಸವನ್ನು ಧರಿಸಿರುತ್ತಾರೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಸಂಚಾರಿ ಪೆÇಲೀಸ್ ಠಾಣೆಯ ದೂ. 08392-275722, ಮೊ.9480803048 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಸಂಚಾರಿ ಪೆÇಲೀಸ್ ಠಾಣೆಯ ಪೆÇಲೀಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ