ಗುರುವಾರ, ಮೇ 11, 2023

ವ್ಯಕ್ತಿ ಕಾಣೆ ಬಳ್ಳಾರಿ,ಮೇ 11(ಕರ್ನಾಟಕ ವಾರ್ತೆ): ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಶರಣಪ್ಪ ಎನ್ನುವ 54 ವರ್ಷದ ವ್ಯಕ್ತಿ ಮೇ.07 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸುಮಾರು 5.5 ಅಡಿ ಎತ್ತರ, ಕೋಲು ಮುಖ, ತಳ್ಳನೆಯ ಮೈಕಟ್ಟು, ತಲೆಯಲ್ಲಿ ಕೂದಲು ಅರ್ಧ ಭಾಗ ಉದುರಿ ಹೋಗಿರುತ್ತವೆ. ಬಾಯಿಯಲ್ಲಿ ಕೆಳಗಿನ ಒಂದು ಹಲ್ಲು ಇರುವುದಿಲ್ಲ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಲುಂಗಿ ಹಾಗೂ ಬಿಳಿ ಶರ್ಟ್ ಧರಿಸಿರುತ್ತಾನೆ. ಬಲಗೈಯಲ್ಲಿ ಕನ್ನಡ ಅಕ್ಷರದ ಜಯಮ್ಮ ಎಂದು ಅಚ್ಚೆ ಇರುತ್ತದೆ. ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ.08395-250100, ಮೊ.9480803062, ಸಂಡೂರು ವೃತ್ತದ ಸಿ.ಪಿ.ಐ ದೂ.08395-260100, ಮೊ.9480803036, ಡಿವೈ.ಎಸ್.ಪಿ ತೋರಣಗಲ್ಲು ಅವರ ಮೊ.9480803010, ಎಸ್.ಪಿ ಬಳ್ಳಾರಿ ಅವರ ದೂ.08932-258400, ಬಳ್ಳಾರಿ ಕಂಟ್ರೋಲ್ ರೂಮ್ ದೂ.08392-279100ಗೆ ಸಂಪರ್ಕಿಸಬಹುದಾಗಿದೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ