ಶುಕ್ರವಾರ, ಮೇ 12, 2023

ಹಚ್ಚೋಳ್ಳಿ ವಿದ್ಯುತ್ ವಿತರಣಾ ಕೇಂದ್ರ; ವಿದ್ಯುತ್ ವ್ಯತ್ಯಯ ಮೇ 15 ರಂದು ಬಳ್ಳಾರಿ,ಮೇ 12(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 33 ಕೆವಿ ಹಚ್ಚೋಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಮತ್ತು ಮಾರ್ಗದ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮೇ 15 ರಂದು ಬೆಳಗ್ಗೆ 10 ರಿಂದ ಸಂಜೆ 06 ರವರೆಗೆ ಈ ವ್ಯಾಪ್ತಿಯ ಹಚ್ಚೋಳಿ ಗ್ರಾಮ, ವಟಮುರನಿ, ಚಿಕ್ಕಬಳ್ಳಾರಿ, ಕುಡುದರಹಾಳ್, ನಾಗಲಾಪುರ, ಶ್ರೀಧರಗಡ್ಡೆ, ಹೊನ್ನಾಳಿ, ಮಾಟೂರು, ಟಿ.ಸ್.ಕಡ್ಲೂರು, ಬಿರಹಳ್ಳಿ, ರಾವಿಹಾಳ್, ಎ.ಕೆ. ಹಾಳ್, ಬಸರ ಹಳ್ಳಿ ಇತ್ಯಾದಿ ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸಿಂಧು.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ