ಸೋಮವಾರ, ಮೇ 22, 2023

ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ 8ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ): ನಗರದ ಕಂಟೋನ್‍ಮೆಂಟ್‍ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ 2023-24ನೇ ಸಾಲಿಗೆ 8 ನೇ ತರಗತಿಗೆ ಪ್ರವೇಶ ಬಯಸುವ 7 ನೇ ತರಗತಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 7ನೇ ತರಗತಿ ಉತ್ತೀರ್ಣರಾದ ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರವೇಶಕ್ಕಾಗಿ ಅರ್ಜಿಗಳನ್ನು ಕಚೇರಿ ಸಮಯದಲ್ಲಿ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 08 ರೊಳಗೆ ಶಾಲೆಯ ಕಚೇರಿಗೆ ಸಲ್ಲಿಸಬೇಕು. *ಸೌಲಭ್ಯಗಳು:* ಈ ಶಾಲೆಯಲ್ಲಿ (ಜೆಟಿಎಸ್) ಓದಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ (ಪಾಲಿಟೆಕ್ನಿಕ್) ಕಾಲೇಜುಗಳಲ್ಲಿ ಪ್ರತಿ ವಿಭಾಗದಲ್ಲಿಯೂ ವಿಶೇಷ ಕೋಟಾ (ಜೆಟಿಎಸ್) ಅಡಿಯಲ್ಲಿ ನೇರವಾಗಿ ಪ್ರವೇಶ ಸಿಗುತ್ತದೆ. ಡಿಪ್ಲೋಮಾ (ಪಾಲಿಟೆಕ್ನಿಕ್) ಮತ್ತು ಇಂಜಿನೀಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆಯುವ, ಜೆಟಿಎಸ್‍ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕಿUಇSಖಿ ಕಂಪನಿ ಮಾಲೀಕರು (ಜೆಟಿಎಸ್ ಹಳೆಯ ವಿದ್ಯಾರ್ಥಿ) ಉಚಿತ ಶುಲ್ಕ ಹಾಗೂ ಅವರದೇ ಕಂಪನಿ ಮತ್ತು ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಕೊಡಿಸಲು ಸಹಕರಿಸುತ್ತಾರೆ. ಪ್ರತಿ ವರ್ಷ 8, 9 ಹಾಗೂ 10ನೇ ತರಗತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಿUಇSಖಿ ಉಟobಚಿಟ ಕಂಪನಿ ವತಿಯಿಂದ ಎಲ್ಲರಿಗೂ ಸೇರಿ ರೂ.1 ಲಕ್ಷಗಳ ಬಹುಮಾನ ನೀಡಲಾಗುವುದು. ಜೆಟಿಎಸ್‍ನಲ್ಲಿ ಓದಿದ ವಿದ್ಯಾರ್ಥಿಗಳು ಹೈಸ್ಕೂಲ್ ಹಂತದಲ್ಲಿಯೇ ತಾಂತ್ರಿಕ ಶಿಕ್ಷಣವನ್ನು ಪಡೆಯುವುದರಿಂದ ತಮ್ಮ ಸ್ವಂತ ಬುದ್ಧಿಶಕ್ತಿಯಿಂದ ಉದ್ಯೋಗ ಮಾಡಲು ಶಕ್ತರಾಗುವರು. ಪ್ರತಿ ವರ್ಷ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ ರೂ.2500 ಗಳಂತೆ ಸ್ಕಾಲರ್‍ಶಿಪ್ (ಶಿಷ್ಯವೇತನ) ನೀಡಲಾಗುವುದು. ಸುಸಜ್ಜಿತ ವರ್ಗಕೋಣೆಗಳು, ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ವಿಶಾಲವಾದ ಆಟದ ಮೈದಾನ ಸೌಲಭ್ಯವಿದೆ. ಈ ಶಾಲೆಯಲ್ಲಿ ಓದಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ISRO, DRDO, HOMIBABA NUCLEAR INSTITUTE ಇನ್ನೂ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನುರಿತ ಉಪನ್ಯಾಸಕರಿಂದ ಬೋಧನೆ ನೀಡಲಾಗುವುದು ಹಾಗೂ ಪಠ್ಯಪುಸ್ತಕ ಮತ್ತು ನೋಟ್ಸ್ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಂಟೋನ್‍ಮೆಂಟ್‍ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಅಥವಾ 08392-294005, 8073441063, 8867255590 ಮತ್ತು 9880867654 ಗೆ ಸಂಪರ್ಕಿಸಬಹುದು ಎಂದು ಸಕಾರಿ ತಾಂತ್ರಿಕ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ