ಮಂಗಳವಾರ, ಮೇ 23, 2023

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯಿಂದ 2023-24 ನೇ ಸಾಲಿಗೆ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. *ರಾಜ್ಯವಲಯ ಯೋಜನೆಗಳು:* ಜಲಾಶಯ, ನದಿಭಾಗದ, ಕೆರಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ. ಮೀನುಮರಿ ಖರೀದಿಸಲು ನೆರವು ಯೋಜನೆ. ಕೆರೆ, ಜಲಾಶಯಗಳ ಅಂಚಿನ ಕೊಳೆಗಳಲ್ಲಿ ಮೀನುಮರಿ ಪಾಲನೆಗೆ ನೆರವು. ಕೆರಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ, ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆಗೆ ಸಹಾಯಧನ ನೆರವು ನೀಡಲಾಗುವುದು. ಅರ್ಹ ಫಲಾನುಭವಿಗಳು ಆನ್‍ಲೈನ್‍ನ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸಲ್ಲಿಸಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳೊಡನೆ ಆಯಾ ತಾಲೂಕಿನ ಮೀನುಗಾರಿಗೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ತಾಲೂಕು ವ್ಯಾಪ್ತಿಗೆ ಶಿವಣ್ಣ-ಮೊ.9449593156 ಹಾಗೂ ಸಂಡೂರು ವ್ಯಾಪ್ತಿಗೆ ಜಿ.ಶಾಂತಕುಮಾರ್-ಮೊ.9620177588 ಇವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ