ಶನಿವಾರ, ಮೇ 20, 2023
6ನೇ ತರಗತಿಗೆ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶಾತಿ: ಅರ್ಜಿ ಆಹ್ವಾನ
ಬಳ್ಳಾರಿ,ಮೇ 20(ಕರ್ನಾಟಕ ವಾರ್ತೆ):
ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ 6ನೇ ತರಗತಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಅರ್ಹತಾ ಪರೀಕ್ಷೆ ಮೂಲಕ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಾಷು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಶಾಲೆಗಳ ವಿವರ:* ವಸತಿ ರಹಿತ ಶಾಲೆಗಳಾದ ಅಲ್ಲೀಪುರದ ವಿಶ್ವೇಶ್ವರಯ್ಯ ಪ್ರೌಢ ಶಾಲೆ (ಬೆಸ್ಟ್ ಸ್ಕೂಲ್), ವಿದ್ಯಾನಗರದ ನಂದ ವಸತಿ ಶಾಲೆ, ಬೆಳಗಲ್ ಕ್ರಾಸ್‍ನ ನಂದಿ ಪೌಢಶಾಲೆ (ಸಿ.ಬಿ.ಎಸ್.ಇ). ವಸತಿ ಸಹಿತ ಶಾಲೆಗಳಾದ ಸಿರುಗುಪ್ಪ ವಿಜಯಮೇರಿ ಪ್ರಾಥಮಿಕ ಶಾಲೆ, ದಮ್ಮೂರಿನ ಬೃಂದಾ ಇಂಟರ್‍ನ್ಯಾಷನಲ್ ಸ್ಕೂಲ್.
ಪರಿಶಿಷ್ಟ ಜಾತಿಯ 50 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
*ಅರ್ಹತೆಗಳು:* ಪರಿಶಿಷ್ಟ ಜಾತಿಯ ವಿದ್ಯಾರ್ಥಿಯಾಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಒಳಗಿರಬೇಕು. ಅಭ್ಯರ್ಥಿಯು 5 ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಅಭ್ಯರ್ಥಿಯ ವಾಸಸ್ಥಳ ದಾಖಲಾತಿ ನೀಡಬೇಕು.
*ಬೇಕಾದ ದಾಖಲೆಗಳು:* 5 ನೇ ತರಗತಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ವಿದ್ಯಾರ್ಥಿಯ ಪಾಸ್‍ಪೋರ್ಟ್ ಸೈಜ್ ಫೋಟೋ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಮುಖ್ಯೋಪಾಧ್ಯಾಯರಿಂದ ನಡತೆ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಹಾಗೂ ಇತರೆ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮೇ 25 ರೊಳಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೌಲ್‍ಬಜಾರ್ ಮೊದಲನೇ ಗೇಟ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಹಾಯಕ ನಿರ್ದೇಶಕರ ಕಚೇರಿ ಅತವಾ ದೂ.08392-244738, ಮೊ.9480843073 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ