ಮಂಗಳವಾರ, ಮೇ 16, 2023

ಅಪರಿಚಿತ ಮೃತ ಗಂಡಸಿನ ಶವ ಪತ್ತೆ; ವಾರಸುದಾರರ ಪತ್ತೆಗಾಗಿ ಮನವಿ ಬಳ್ಳಾರಿ,ಮೇ 16(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗುಗ್ಗರಹಟ್ಟಿ ಬಳಿ ಇರುವ ಕಾಲುವೆಯ ಸೇತುವೆ ಮುಂಭಾಗದ ರಸ್ತೆಯ ಪಕ್ಕದಲ್ಲಿನ ಮುಳ್ಳಿನ ಪೊದೆಯಲ್ಲಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವ ಶವ ಪತ್ತೆಯಾಗಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಚಹರೆ ಗುರುತು: ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಮುಖ ಮತ್ತು ದೇಹದ ಚರ್ಮ ಕಪ್ಪಾಗಿರುತ್ತದೆ. ಮೈಮೇಲೆ ಅಂಗಿ ಇರುವುದಿಲ್ಲ. ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ. ಶವವನ್ನು ವಿಮ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ದೂ.08392-276461, ಮೊ.9480803049 ಹಾಗೂ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.083922-258100 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕೆ.ಎಸ್.ಮಾರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ