ಬುಧವಾರ, ಮೇ 24, 2023

ಸಿರುಗುಪ್ಪ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಮೇ 25 ರಂದು ಬಳ್ಳಾರಿ,ಮೇ 24(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಳೆಯ 11 ಕೆವಿ ಬ್ರೇಕರ್‍ಗಳನ್ನು ಬದಲಿಸಿ ನೂತನ ಬ್ರೇಕರ್‍ಗಳನ್ನು ಅಳವಡಿಸುವ ಕಾಮಗಾರಿಯನ್ನು ಸಿರುಗುಪ್ಪ ಕೆಪಿಟೆಸಿಎಲ್ ನಿಗಮದಿಂದ ಕೈಗೆತ್ತಿಕೊಂಡಿರುವುದರಿಂದ ಮೇ 25 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸಿರುಗುಪ್ಪ ತಾಲೂಕಿನ ವಿವಿಧೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. *ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವ ಪ್ರದೇಶಗಳು:* ಸಿರುಗುಪ್ಪ ಪಟ್ಟಣ ಹಾಗೂ ಕೈಗಾರಿಕಾ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಾದ ರಾರಾವಿ, ಅರಳಿಗನೂರು, ಪೆÇಪ್ಪನಾಳ್, ಮಂಜಿನಾಳ್ ಕ್ಯಾಂಪ್, ಹಿರೆಹಾಳ್ ಕ್ಯಾಂಪ್, ಕೋಟೆಹಾಳ್ ಕ್ಯಾಂಪ್, ಕೆ.ಸುಗೂರು, ಬೆಂಚಿ ಕ್ಯಾಂಪ್, ಮುದೇನೂರು, ಕೆ.ಬೆಳಗಲ್, ಚಾಣಕನೂರು, ಅಲಬನೂರು, ಇಟ್ಟಗೆಹಾಳು, ಬಂಡ್ರಾಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬ್ರೇಕರ್ ಬದಲಾವಣೆ ಕಾಮಗಾರಿ ಪೂರ್ಣಗೊಳಿಸಲು ಸುಮಾರು 15 ದಿನಗಳ ಕಾಲಾವಧಿ (ಜೂ.10 ರವರೆಗೆ) ಬೇಕಾಗಿರುವುದಾಗಿ ಪರ್ಯಾಯ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಕೆಪಿಟಿಸಿಎಲ್ ಅಧಿಕಾರಿಗಳು ಕೋರಿರುತ್ತಾರೆ. ಬ್ರೇಕರ್‍ಗಳನ್ನು ಹೊರತುಪಡಿಸಿ ಲಭ್ಯವಿರುವ ಬ್ರೇಕರ್‍ಗಳ ಮೇಲೆ ಸಿರುಗುಪ್ಪ ನಗರ, ಕೈಗಾರಿಕಾ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವವರೆಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಸಂಭವ ಉಂಟಾಗಬಹುದಾಗಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕು. ನೀರಾವರಿ ಪಂಪ್‍ಸೆಟ್ ಮಾರ್ಗಗಳನ್ನು ಕಾಮಗಾರಿ ನಿರ್ವಹಿಸುವ ಸಮಯದಲ್ಲಿ ಮಧ್ಯರಾತ್ರಿ 12 ರಿಂದ ಬೆಳಗ್ಗೆ 07 ರವರೆಗೆ ವಿದ್ಯುತ್ ಪೂರೈಸಲಾಗುವುದು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ