ಸೋಮವಾರ, ಮೇ 29, 2023

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಮುನಿರಾಬಾದ್ ರೈಲ್ವೆ ನಿಲ್ದಾಣ ಮತ್ತು ಹೊಸಪೇಟೆ ರೈಲ್ವೆ ನಿಲ್ದಾಣಗಳ ಮಧ್ಯ ರೈಲ್ವೆ ಹಳಿಯಲ್ಲಿ ಸುಮಾರು 65 ವರ್ಷದ ಅನಾಮಧೇಯ ವ್ಯಕ್ತಿಯು ಮೇ 27 ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು. ಚಹರೆ ಗುರುತು: ಎತ್ತರ ಸುಮಾರು 5.5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ಅಗಲವಾದ ಹಣೆ, ಉದ್ದನೆಯ ಮೂಗು, ತಲೆಯಲ್ಲಿ ಸುಮಾರು ಎರಡರಿಂದ ಮೂರು ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಹೊಂದಿದ್ದು, ಸಣ್ಣಗೆ ಬಿಳಿ ಮೀಸೆ ಬಿಟ್ಟಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆಗಳು: ಬಿಳಿಯ ಬಣ್ಣದ ತುಂಬು ತೋಳಿನ ಉದ್ದನೆ ಶರ್ಟ್, ಬಿಳಿ ಬಣ್ಣದ ಲುಂಗಿ ಹಾಗೂ ಬಿಳಿ ಬಣ್ಣದ ತುಂಬು ಬನಿಯನ್, ಬೂದು ಬಣ್ಣದ ಖಾಚಾ ಧರಿಸಿರುತ್ತಾನೆ. ಮೇಲ್ಕಂಡ ಚಹರೆಯುಳ್ಳ ಅನಾಮಧೇಯ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಉಪ ನಿರೀಕ್ಷಕರ ಮೊ.9480802131, ರಾಯಚೂರು ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ರೈಲ್ವೇ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ