ಶುಕ್ರವಾರ, ಮೇ 19, 2023

ಮೇ 20 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಬಳ್ಳಾರಿ,ಮೇ 19(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಜೆಸ್ಕಾಂ ವ್ಯಾಪ್ತಿಯ ಉಪ-ವಿಭಾಗ-1 ಮತ್ತು ಉಪವಿಭಾಗ-2 ರÀ ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಮತ್ತು ಇತ್ಯರ್ಥ ಪಡಿಸಲು ಗ್ರಾಹಕರ ಕುಂದು ಕೊರತೆ ಸಭೆಯನ್ನು ಮೇ 20 ರಂದು ಬೆಳಗ್ಗೆ 11.30 ಕ್ಕೆ ನಗರ ಉಪ-ವಿಭಾಗದಲ್ಲಿ ನಡೆಸಲಾಗುವುದು. ಕುಂದು ಕೊರತೆಗಳಿರುವ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ