ಶುಕ್ರವಾರ, ಮೇ 19, 2023
ಅನಾಮಧೇಯ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮೇ 19(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಘವೇಂದ್ರ ಕಾಲೋನಿಯ ಪ.ಜಾತಿ ಮತ್ತು ಪ.ಪಂಗಡ ಹಾಸ್ಟೆಲ್ ಪಕ್ಕದಲ್ಲಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ವ್ಯಕ್ತಿಯು ನಿಶ್ಯಕ್ತನಾಗಿ ಬಿದ್ದಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೇ 17 ರಂದು ಮೃತಪಟ್ಟಿರುತ್ತಾನೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಮನವಿ.
ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ತಲೆಯಲ್ಲಿ ಅಂದಾಜು 2 ಇಂಚು ಬಿಳಿ ಕೂದಲು ಹಾಗೂ ತುಂಬು ತೋಳಿನ ಚೆಕ್ಸ್ ಅಂಗಿ ಧರಿಸಿರುತ್ತಾನೆ.
ಮೇಲ್ಕಂಡ ಚಹರೆಯುಳ್ಳ ಅನಾಮಧೇಯ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ