ಶುಕ್ರವಾರ, ಮೇ 19, 2023

ನಿಧಿ ಅಪ್ಕೆ ನಿಕಟ್ ಮೇ 29 ರಂದು ಬಳ್ಳಾರಿ,ಮೇ 19(ಕರ್ನಾಟಕ ವಾರ್ತೆ): ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಜಿಲ್ಲಾ ಪ್ರಾದೇಶಿಕ ಕಚೇರಿಯ ಉದ್ಯೋಗಿಗಳ ಭವಿಷ್ಯನಿಧಿ ಮತ್ತು ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ನಿವಾರಿಸಲು ಮೇ 29 ರಂದು ಬೆಳಗ್ಗೆ 9ರಿಂದ ಸಂಜೆ 6 ರವರೆಗೆ ‘ನಿಧಿ ಆಪ್ಕೆ ನಿಕಟ್' ಸಿರುಗುಪ್ಪ ತಾಲೂಕಿನ ಎಸ್‍ಇಎಸ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಬಳ್ಳಾರಿ ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತ ಕೆ. ವೆಂಕಟಸುಬ್ಬಯ್ಯ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮವು ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದುಕೊರತೆ ಪರಿಹಾರ ಮತ್ತು ಮಾಹಿತಿ ವಿನಿಮಯಕ್ಕೆ ಅರಿವು ಮೂಡಿಸುವ ಮತ್ತು ಪ್ರಭಾವ ಬೀರುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ:08392-226304ಗೆ ಸಂಪರ್ಕಿಸಬಹುದಾಗಿದೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ