ಗುರುವಾರ, ಮೇ 11, 2023
ರಾಜ್ಯ ಮಟ್ಟದ ಪ್ರಬಂಧ ಸ್ವರ್ಧೆ ಆಯೋಜನೆ
ಬಳ್ಳಾರಿ,ಮೇ.11(ಕರ್ನಾಟಕ ವಾರ್ತೆ):
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ವರ್ಧೆ ಹಾಗೂ ಒಂದು ದಿನದ ಆನ್‍ಲೈನ್ ಕಾರ್ಯಗಾರ ಆಯೋಜಿಸÀಲಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್ ಅವರು ತಿಳಿಸಿದ್ದಾರೆ.
ರಾಮನ್ ಸಂಶೋಧನಾ ಸಂಸ್ಥೆಯ(ಆರ್‍ಆರ್‍ಐ) 75ನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ಪರಿಸರ ಸಂಘದ(ಇಎಬಿ) 25ನೇ ವಾರ್ಷಿಕೋತ್ಸವದ ಅಂಗವಾಗಿ ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ‘ನಗರ ಭಾಗದ ನೀರು ಸಂರಕ್ಷಣೆ ಹಾಗೂ ನಿರ್ವಹಣೆ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ಆಯೋಜಿಸಲಾಗಿರುತ್ತದೆ.
ಕಾರ್ಯಗಾರದಲ್ಲಿ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿದ್ದು, ಜೂ.01ರೊಳಗಾಗಿ ಪ್ರಬಂಧ ಬರೆದು ಕಳುಹಿಸಬಹುದು.
ಕನ್ನಡ ಅಥವಾ ಇಂಗ್ಲೀμï ಭಾμÉಯಲ್ಲಿ ಪ್ರಬಂಧ ಬರೆದು ಕಳುಹಿಸಬಹುದಾಗಿದ್ದು, 1 ಸಾವಿರ ಪದಗಳು ಮೀರದಂತೆ, ಪಿಡಿಎಫ್ ಫಾರ್ಮಾಟ್ ಮೂಲಕ ಕಳುಹಿಸಬೇಕು. ಕನ್ನಡ ಭಾμÉಯಲ್ಲಿ ಪ್ರಬಂಧ ಬರೆಯುವವರು ಯುನಿಕೋಡ್(12 ಸೈಜ್) ಹಾಗೂ ಇಂಗ್ಲೀμï ಭಾμÉಯಲ್ಲಿ ಪ್ರಬಂಧ ಬರೆಯುವವರು ಏರಿಯಲ್ ಫಾಂಟ್(14 ಸೈಜ್) ಬಳಸಬೇಕು. ಕೃತಿಚೌರ್ಯ ಕಂಡುಬಂದಲ್ಲಿ ಪ್ರಬಂಧ ತಿರಸ್ಕರಿಸಲಾಗುವುದು.
ಪ್ರಬಂಧ ಬರೆಯುವ ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ಕಳುಹಿಸಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾಗಲಿರುವ ವಿದ್ಯಾರ್ಥಿಗಳಿಗೆ ಇ-ಸರ್ಟಿಫಿಕೇಟ್ ನೀಡಲಾಗುತ್ತದೆ. ಮಾಹಿತಿಗಾಗಿ www.kstacademy.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ