ಸೋಮವಾರ, ಮೇ 22, 2023

ಯುವಕ ನಾಪತ್ತೆ ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ): ಕುರುಗೋಡು ಪಟ್ಟಣದ ನೀಲಮ್ಮ ಮಠದ ಹತ್ತಿರದ 10 ನೇ ವಾರ್ಡ್‍ನ ನಿವಾಸಿ ಸಿ. ಹರಿಅಚ್ಯುತ ಎನ್ನುವ 21 ವರ್ಷದ ಯುವಕ ಮೇ 21 ರಂದು ಕಾಣೆಯಾಗಿರುವ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುವಕನ ಚಹರೆ ಗುರುತು: ಸುಮಾರು 5.2 ಅಡಿ ಎತ್ತರ, ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾನೆ. ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರೆದಲ್ಲಿ ಕುರುಗೋಡು ಪೊಲೀಸ್ ಠಾಣೆಯ ದೂ.08393-263433, ಮೊ.9480803051, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ