ಶುಕ್ರವಾರ, ಮೇ 19, 2023

ಕುರುಗೋಡು: ಮರುಬಳಕೆ ವಸ್ತುಗಳ ಸ್ವೀಕಾರ ಬಳ್ಳಾರಿ,ಮೇ 19(ಕರ್ನಾಟಕ ವಾರ್ತೆ): ಕುರುಗೋಡು ಪಟ್ಟಣದಲ್ಲಿ ಮೇರಿ ಲೈಫ್ ಸ್ಟೈಲ್ ಫರ್ ಎನ್‍ವಿರಾನ್‍ಮೆಂಟ್ ಮೇರಾ ಸ್ವಚ್ಛ್ ಶೆಹರ್ ಯೋಜನೆಯ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ. ಪಟ್ಟಣದ ಬಳ್ಳಾರಿ ರಸ್ತೆಯ ಬಸ್ ನಿಲ್ದಾಣದ ಹತ್ತಿರದ ಈಶ್ವರ ಪಾರ್ಕ್ ಮತ್ತು ಮುಷ್ಟಗಟ್ಟೆ ರಸ್ತೆಯಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಪುರಸಭೆ ಮಳಿಗೆಯಲ್ಲಿ ಆರ್‍ಆರ್‍ಆರ್ ((Reduced, reused, recycled) ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೇ 20 ರಿಂದ ಜೂನ್ 05 ರವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 01 ರವರೆಗೆ ಮರುಬಳಕೆ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ. ಸಾರ್ವಜನಿಕರು ಮರುಬಳಕೆ ವಸ್ತುಗಳಾದ ಆಟಿಕೆ ಸಾಮಾನುಗಳು, ಬಳಸಿದ ಬಟ್ಟೆ, ಜೀನ್ಸ್, ಸಮವಸ್ತ್ರ, ಸೀರೆ ಹಾಗೂ ಮರುಬಳಕೆ ಮಾಡಬಹುದಾದ ಬಟ್ಟೆಗಳು, ದಿನಪತ್ರಿಕೆಗಳು, ಮಾಸ ಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು ಮತ್ತು ಎಲೆಕ್ಟ್ರಾನಿಕ್ ಇತ್ಯಾದಿ ವಸ್ತುಗಳನ್ನು ಸಾರ್ವಜನಿಕರು ನೀಡಬಹುದಾಗಿದೆ. ಸಾರ್ವಜನಿಕರು ಮರುಬಳಕೆ, ಪುನರ್‍ಬಳಕೆ ಹಾಗೂ ಕಡಿಮೆಗೊಳಿಸಬಹುದಾದ ತ್ಯಾಜ್ಯವನ್ನು ಆರ್‍ಆರ್‍ಆರ್ ಕೇಂದ್ರಕ್ಕೆ ನೀಡಿ ನೊಂದಣಿ ಮಾಡಿಕೊಳ್ಳಬೇಕು. ಸೆಲ್ಫಿ ಸ್ಟ್ಯಾಂಡ್‍ನಲ್ಲಿ ಸೆಲ್ಫಿ ನೀಡಿ ಸಹಿ ಸಂಗ್ರಹಣಾ ಫಲಕದಲ್ಲಿ ಸಹಿ ಮಾಡಿ, ಪಟ್ಟಣದ ಪ್ರಗತಿಗೆ ಸಹಕರಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕರಿಗೆ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹಕವನ್ನು ನೀಡಿ ಗೌರವಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ