ಸೋಮವಾರ, ಮೇ 29, 2023

ಸಿರುಗುಪ್ಪ: ಸರ್ಕಾರಿ ಐ.ಟಿ.ಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): ಸಿರುಗುಪ್ಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-24 ನೇ ಸಾಲಿನ ವಿವಿಧ ವೃತ್ತಿಗಳಾದ ವಿದ್ಯುತ್ ಕರ್ಮಿ, ಜೋಡಣೆಗಾರ ಪ್ರವೇಶಕ್ಕಾಗಿ ಮೆರಿಟ್-ಕಮ್-ಲಿಸರ್ವೇಶನ್ ಆಧಾರದ ಮೇಲೆ ಆನ್‍ಲೈನ್ ಮೂಲಕ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿರುಗುಪ್ಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ವಿ.ಶೇಷಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಸಿರುಗುಪ್ಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂನ್ 07 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಹೈ.ಕ (371ಜೆ) ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಹಾಗೂ ಗ್ರಾಮೀಣ ಪ್ರಮಾಣ ಪತ್ರ, ಇನ್ನೀತರ ದಾಖಲಾತಿಗಳು. ಹೆಚ್ಚಿನ ಮಾಹಿತಿಗಾಗಿ ಮೊ.9448441568, 9902781032 ಹಾಗೂ 9980862730 ಗೆ ಸಂಪರ್ಕಿಸಬಹುದು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ