ಸೋಮವಾರ, ಮೇ 29, 2023

ಸರ್ಕಾರಿ ಐಟಿಐನಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಮೆರಿಟ್-ಕಮ್-ರಿಸರ್ವೇಶನ್ ಆಧಾರÀದ ಮೇಲೆ ಬಳ್ಳಾರಿ ಜಿಲ್ಲೆಯಲ್ಲಿ ಬರುವ ಸಂಸ್ಥೆಗಳಲ್ಲಿ ಆನ್‍ಲೈನ್ ಮೂಲಕ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೆ.ಗವಿಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಧಾರ್ ಕಾರ್ಡ್, ಹೈಕ(371ಜೆ) ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮತ್ತು ಟಿಸಿ,ಜಾತಿ ಮತ್ತು ಆದಾಯ ಪ್ರಮಾಣಪತ್ರ,ಕನ್ನಡ ಮತ್ತು ಗ್ರಾಮೀಣ ಪ್ರಮಾಣಪತ್ರಗಳು ಹಾಗೂ ಇನ್ನೀತರ ದಾಖಲೆಗಳೊಂದಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಬಳ್ಲಾರಿಯ ಕಂಟೋನ್ಮೆಂಟ್ ಪ್ರದೇಶದ ರೇಡಿಯೋ ಪಾರ್ಕ್ ಹತ್ತಿರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.10 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಟಾಟಾ ಉದ್ಯೋಗ ಯೋಜನೆಯಡಿ ಅನುμÁ್ಠನಗೊಳಿಸಿರುವ 03 ಮಟ್ಟು 10 ಧೀರ್ಘಾವಧಿಯ ವೃತ್ತಿಗಳಿಗೆ ಆನ್‍ಲೈನ್‍ನಲ್ಲ್ಲಿ ಮೊದಲ ಆದ್ಯತೆ ಮೇರೆಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಳ್ಳಾರಿ ಹಾಗೂ ಹತ್ತಿರದ ಸರ್ಕಾರಿ ಐಟಿಐಗೆ ಭೇಟಿ ನೀಡಿ ವಿಚಾರಿಸಬಹುದು ಅಥವಾ ದೂ:08392-240472, ಮೊ.9945947375, 9480939802 ಗೆ ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ