ಬುಧವಾರ, ಮೇ 10, 2023
ವಿಧಾನಸಭೆ ಸಾರ್ವತ್ರಿಕ ಚುನಾವಣೆ; ಮಾದರಿ ನೀತಿ ಸಂಹಿತೆ ಉಲ್ಲಂಘನೆ
15.20 ಲಕ್ಷ ನಗದು, 177.68 ಲೀ. ಮದ್ಯ ವಶಕ್ಕೆ: ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಮಾಹಿತಿ
ಬಳ್ಳಾರಿ,ಮೇ 10(ಕರ್ನಾಟಕ ವಾರ್ತೆ):
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಎಫ್‍ಎಸ್‍ಟಿ ತಂಡ ಹಾಗೂ ಪೆÇಲೀಸ್ ಇಲಾಖೆ ತಪಾಸಣೆ ವೇಳೆ ಮಂಗಳವಾರದಂದು ಸೂಕ್ತ ದಾಖಲೆಯಿಲ್ಲದ 15,20,560 ರೂ. ಮೊತ್ತದ ನಗದು ಮತ್ತು ಅನಧಿಕೃತವಾಗಿ ಸಾಗಿಸುತ್ತಿದ್ದ 88,371 ರೂ. ಮೌಲ್ಯದ 177.68 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡವು ತಪಾಸಣೆ ವೇಳೆ 8,88,060 ರೂ. ಮೊತ್ತದ ನಗದು ಹಾಗೂ ಪೆÇಲೀಸ್ ಇಲಾಖೆ ತಪಾಸಣೆ ವೇಳೆ 6,40,500 ರೂ. ನಗದು ಸೇರಿದಂತೆ ಒಟ್ಟು 15,20,560 ರೂ. ಮೊತ್ತದ ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯಿಂದ 4,512 ರೂ. ಮೌಲ್ಯದ 5.40 ಲೀಟರ್ ಮದ್ಯ ಹಾಗೂ ಪೆÇಲೀಸ್ ಇಲಾಖೆಯಿಂದ 83,859 ರೂ. ಮೌಲ್ಯದ 172.28 ಲೀಟರ್ ಮದ್ಯ ಸೇರಿದಂತೆ ಒಟ್ಟು 88,837 ರೂ. ಮೌಲ್ಯದ 177.68 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ